ನವದೆಹಲಿ: ಏಷನ್ ಗೇಮ್ಸ್ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಭಾರತದ ಇದುವರೆಗಿನ ಅತಿ ದೊಡ್ಡ ಸಾಹಸಿ ಪ್ರದರ್ಶನ ಇದಾಗಿದೆ. ವಿದೇಶಿ ನೆಲದಲ್ಲಿ ಈ ಬಾರಿ ಭಾರತ ಅತ್ಯಧಿಕ ಪದಕಗಳನ್ನು ಜಯಿಸಿದೆ. ನೀವೆಲ್ಲ ಕ್ರೀಡಾಪಟುಗಳು ತೋರಿಸಿದ ಪರಾಕ್ರಮ, ಪಟ್ಟ ಶ್ರಮ, ಫಲಿತಾಂಶಗಳ ಕಾರಣದಿಂದ ದೇಶದ ಮೂಲೆ ಮೂಲೆಯಲ್ಲೂ ಸಂಭ್ರಮದ ಸನ್ನಿವೇಶ ಸೃಷ್ಟಿಯಾಯಿತು. ಪದಕ ಪಟ್ಟಿಯಲ್ಲಿ ನೂರರ ಗಡಿ ದಾಟಲು ನೀವೆಲ್ಲ ರಾತ್ರಿ ಹಗಲು ಒಂದೇ ಎಂಬಂತೆ ಕಷ್ಟಪಟ್ಟಿದ್ದೀರಿ ಎಂದರು.
ಏಷನ್ ಗೇಮ್ಸ್ ನಲ್ಲಿ ನೀವೆಲ್ಲ ಕ್ರೀಡಾಪಟುಗಳು ತೋರಿಸಿದ ಅಭೂತಪೂರ್ವ ಪ್ರದರ್ಶನದಿಂದ ಇಡೀ ದೇಶವು ಹೆಮ್ಮೆಯ ಅನುಭೂತಿಯಲ್ಲಿದೆ. ನಮ್ಮ ನಾರಿ ಶಕ್ತಿಯು ಎಲ್ಲಾ ಕ್ರೀಡೆಗಳಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದೆ. ಯಾವ ಉತ್ಸಾಹದಿಂದ ನಮ್ಮ ಮಹಿಳಾ ಕ್ರೀಡಾಳುಗಳು ಪ್ರದರ್ಶನ ನೀಡಿದರೋ ಅದು ಭಾರತೀಯ ಹೆಣ್ಣು ಮಕ್ಕಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.
ಭಾರತದ ಕ್ರೀಡಾಪಟುಗಳಿಗೆ ವಿಶ್ವ ದರ್ಜೆಯ ಸೌಲಭ್ಯಗಳು ಸಿಗಲಿ ಎಂಬ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿದಿದೆ. ಭಾರತದ ಕ್ರೀಡಾಪಟುಗಳಿಗೆ ದೇಶ ವಿದೇಶಗಳಲ್ಲಿ ಆಡಲು ಹೆಚ್ಚು ಹೆಚ್ಚು ಅವಕಾಶಗಳು ಸಿಗಲಿ ಎಂಬ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿದಿದೆ. ಗ್ರಾಮ ಪಟ್ಟಣಗಳಲ್ಲಿ ವಾಸಿಸುವ ಕ್ರೀಡಾ ಪ್ರತಿಭೆಗಳಿಗೂ ಹೆಚ್ಚು ಹೆಚ್ಚು ಅವಕಾಶ ಸಿಗಲಿ ಎಂಬ ನೆಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿದಿದೆ ಎಂದಿದ್ದಾರೆ.
ನಮ್ಮ ಕ್ರೀಡಾಪಟುಗಳು ಸದಾ ಆತ್ಮವಿಶ್ವಾಸದಿಂದ ಇರಲಿ, ಅವರಿಗೆ ಯಾವುದೇ ರೀತಿಯ ಕೊರತೆಗಳು ಉಂಟಾಗದಿರಲಿ ಎಂಬ ನಿಟ್ಟಿನಲ್ಲಿ ಪೂರ್ಣಶಕ್ತಿಯೊಂದಿಗೆ ನಾವು ಶ್ರಮಿಸುತ್ತಿದ್ದೇವೆ. 9 ವರ್ಷಗಳಿಗಿಂತ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕ್ರೀಡಾ ಬಜೆಟ್ ನಲ್ಲಿ ಮೂರು ಪಟ್ಟು ವೃದ್ಧಿಯಾಗಿದೆ. ‘ಖೇಲೋ ಇಂಡಿಯಾ’ ಗೇಮ್ ಚೇಂಜರ್ ಎಂದು ಸಾಬೀತಾಗಿದೆ ಎಂದಿದ್ದಾರೆ.
Interacting with our incredible athletes who represented India at the Asian Games. Their outstanding performances exemplify true spirit of sportsmanship. https://t.co/SAcnyJDTlc
— Narendra Modi (@narendramodi) October 10, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.