ಅಹ್ಮದಾಬಾದ್: ಪಾಕಿಸ್ತಾನದಿಂದ, ಅಫ್ಘಾನಿಸ್ಥಾನದಿಂದ, ಬಾಂಗ್ಲಾದಿಂದ ಬಂದು ಗುಜರಾತಿನಲ್ಲಿ ನೆಲೆಸಿರುವ ಸುಮಾರು 108 ವಲಸಿಗರಿಗೆ ಇಂದು ಅಹಮದಾಬಾದ್ನಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ಹರ್ಷ ಸಂಘವಿ ಅವರು ಭಾರತದ ಪೌರತ್ವವನ್ನು ಪ್ರದಾನಿಸಿದರು.
ವರದಿಗಳ ಪ್ರಕಾರ, 2016 ಮತ್ತು 2018 ರ ಗೆಜೆಟ್ ಅಧಿಸೂಚನೆಗಳಡಿ ಅಹಮದಾಬಾದ್, ಗಾಂಧಿನಗರ ಮತ್ತು ಗುಜರಾತ್ನ ಕಚ್ನ ಜಿಲ್ಲಾಧಿಕಾರಿಗಳು ಪೌರತ್ವ ಕಾಯ್ದೆಯಡಿಯಲ್ಲಿ ಕಾರ್ಯವಿಧಾನವನ್ನು ಅನುಸರಿಸಿದ ನಂತರ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ಭಾರತೀಯ ಪೌರತ್ವವನ್ನು ನೀಡುವ ಅಧಿಕಾರ ಪಡೆಯಲಾಯಿತು.
ಅಹಮದಾಬಾದ್ ಜಿಲ್ಲಾಧಿಕಾರಿ ಕಚೇರಿಯಿಂದ ಇಲ್ಲಿಯವರೆಗೆ ಸುಮಾರು 1,149 ಪಾಕಿಸ್ತಾನಿ ಹಿಂದೂ ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಗಿದೆ.
ಇಂದು ಪೌರತ್ವ ನೀಡಿಕೆ ಸಂದರ್ಭದಲ್ಲಿ ಅಹಮದಾಬಾದ್ನ ಜಿಲ್ಲಾಧಿಕಾರಿ ಪ್ರವೀಣಾ ಡಿ.ಕೆ, ಅಹಮದಾಬಾದ್ನ ಶಾಸಕರು, ಸಿಂಧ್ ಅಲ್ಪಸಂಖ್ಯಾತ ವಲಸಿಗರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, 108 ಫಲಾನುಭವಿಗಳು ಮತ್ತು ಅವರ ಕುಟುಂಬಗಳು ಉಪಸ್ಥಿತರಿದ್ದರು.
🔸 In a program held in Ahmedabad, 108 applicants from the Ahmedabad district, who migrated from Afghanistan, Bangladesh, and Pakistan to India, were presented with the “Certificate of Indian Citizenship.”
🔸 India’s spirit of acceptance shines through in the dedication and… pic.twitter.com/q02jWIICdR
— Harsh Sanghavi (@sanghaviharsh) September 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.