ನವದೆಹಲಿ: ಜುಲೈ ತಿಂಗಳಲ್ಲಿ ಭಾರತದಲ್ಲಿ 72 ಲಕ್ಷಕ್ಕೂ ಅಧಿಕ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ವರದಿಯ ಪ್ರಕಾರ ಮೆಟಾ ಮಾಲಿಕತ್ವದ ಈ ವಾಟ್ಸಾಪ್ 2023ರ ಜುಲೈ 1 ರಿಂದ ಜುಲೈ 31ರ ನಡುವೆ ಭಾರತದಲ್ಲಿ 72 ಲಕ್ಷಕ್ಕೂ ಅಧಿಕ ದುರುದ್ದೇಶಪೂರಿತ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿದೆ. ಈ ತಿಂಗಳಲ್ಲಿ ಒಟ್ಟು 7,228,000 ಖಾತೆಗಳನ್ನು ವಾಟ್ಸಾಪ್ ಬ್ಯಾನ್ ಮಾಡಿದ್ದು, ಇದರಲ್ಲಿ ಬಳಕೆದಾರರಿಂದ ಯಾವುದೇ ರಿಪೋರ್ಟ್ಗಳು ಬರದೇ ಇದ್ದರೂ ಮುಂಜಾಗೃತೆಯಾಗಿ 3,108,000 ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ಹೇಳಿದೆ.
91 ದೇಶದ ಕೋಡ್ ಮೂಲಕ ಭಾರತೀಯ ಖಾತೆಯನ್ನು ಗುರುತಿಸಲಾಗುತ್ತದೆ. ವಾಟ್ಸಾಪ್ ಐಟಿ ನಿಯಮ 2021ರ ಪ್ರಕಾರ ಮಾಸಿಕ ವರದಿಯನ್ನು ಬಿಡುಗಡೆ ಮಾಡುತ್ತದೆ. ಈ ವರದಿಗಳು ಬಳಕೆದಾರರಿಂದ ಸ್ವೀಕರಿಸಿದ ದೂರುಗಳು ಮತ್ತು ವಾಟ್ಸಾಪ್ ಕೈಗೊಂಡ ಕ್ರಮಗಳ ವಿವರವನ್ನು ಒಳಗೊಂಡಿರುತ್ತದೆ. ವಾಟ್ಸಾಪ್ನ ವರದಿ ಪ್ರಕಾರ, ಭಾರತದಲ್ಲಿ ಜುಲೈನಲ್ಲಿ ಒಟ್ಟು 11,067 ರಿಪೋರ್ಟ್ಗಳನ್ನು ಬಳಕೆದಾರರಿಂದ ಸ್ವೀಕರಿಸಲಾಗಿದ್ದು, ಇದರಲ್ಲಿ 72 ರಿಪೋರ್ಟ್ಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.