ನವದೆಹಲಿ: ದೇಶ ಮತ್ತು ಸಮಾಜದ ಉನ್ನತಿಗೆ ಮಹಿಳಾ ಸಬಲೀಕರಣ ಬಹುಮುಖ್ಯವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಇಂದು ನವದೆಹಲಿಯಲ್ಲಿ ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಶನ್ AWWA ಆಯೋಜಿಸಿದ್ದ ಅಸ್ಮಿತಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಶೇಕಡಾ 50 ರಷ್ಟು ಮಹಿಳಾ ಜನಸಂಖ್ಯೆ ಇದೆ ಮತ್ತು ಅವರು ದೇಶದ ಅಭಿವೃದ್ಧಿ ಪಯಣದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ಪುರುಷನಿಲ್ಲದೇ ಮಹಿಳೆ ಬದುಕಬಲ್ಲಳು, ಹೋರಾಡಿ, ಪ್ರಗತಿ ಸಾಧಿಸಿ ಜಗತ್ತಿಗೆ ತೋರಿಸಬಲ್ಲಳು ಎಂದರು.
ಸಮಾಜ ಮತ್ತು ರಾಷ್ಟ್ರದಲ್ಲಿ ಮಹಿಳಾ ಪ್ರಗತಿಗೆ ಮಹತ್ತರವಾದ ಮಹತ್ವವಿದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದಾಳೆ ಎಂಬ ಮಾತಿದೆ, ಇಂದು ಪ್ರತಿಯೊಬ್ಬ ಯಶಸ್ವಿ ಪುರುಷನ ಪಕ್ಕದಲ್ಲಿ ಮಹಿಳೆ ಇದ್ದಾಳೆ ಎಂದು ಹೇಳಬೇಕು ಎಂದರು.
ಸಮಾಜ ಮತ್ತು ರಾಷ್ಟ್ರದ ಘನತೆ ಮಹಿಳೆಯರ ಸ್ವಾಭಿಮಾನದ ಮೇಲೆ ನಿಂತಿದೆ ಎಂದ ಅವರು, ಕೆಲವು ಹಳೆಯ ವಿಚಾರಗಳನ್ನು ಬಿಟ್ಟು ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಅವರು ಎತ್ತಿ ತೋರಿಸಿದರು. ಪ್ರಗತಿಪರ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಹಿಳೆಯರ ಅಸ್ಮಿತೆ ಮತ್ತು ಆತ್ಮವಿಶ್ವಾಸವನ್ನು ಬಲಪಡಿಸಬಹುದು ಎಂದರು.
ರಾಷ್ಟ್ರಪತಿಗಳು ಎಲ್ಲಾ ಭಾರತೀಯರ ಪರವಾಗಿ ವೀರ ನಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಅಸ್ಮಿತಾ ಐಕಾನ್ಗಳೆಂದು ಗೌರವಿಸಲ್ಪಟ್ಟ ವೀರ ನಾರಿಗಳನ್ನು ಅವರು ಶ್ಲಾಘಿಸಿದರು. ವೀರ್ ನಾರಿಗಳ ಕಲ್ಯಾಣಕ್ಕಾಗಿ AWWA ನ ಪ್ರಯತ್ನಗಳಿಗಾಗಿ ಅವರು ಶ್ಲಾಘಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.