ಶ್ರೀನಗರ: ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ಯೋಧನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುವಾರ ಕೊನೆಗೂ ಪತ್ತೆ ಮಾಡಿದ್ದಾರೆ. ಸೈನಿಕನನ್ನು ಅವರ ತವರು ಕುಲ್ಗಾಮ್ನ ಹಣ್ಣಿನ ತೋಟವೊಂದರಲ್ಲಿ ಪತ್ತೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
“ನಾಪತ್ತೆಯಾಗಿದ್ದ ಸೇನಾ ಯೋಧನನ್ನು ಕುಲ್ಗಾಮ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವೈದ್ಯಕೀಯ ತಪಾಸಣೆಯ ಬಳಿಕ ಜಂಟಿ ವಿಚಾರಣೆ ಆರಂಭವಾಗಲಿದೆ” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.
ರಜೆಯ ಮೇಲೆ ಮನೆಗೆ ಬಂದಿದ್ದ 25 ವರ್ಷದ ಜಾವಿದ್ ವಾನಿ ಶನಿವಾರದಿಂದ ನಾಪತ್ತೆಯಾಗಿದ್ದರು. ಅವರ ಕುಟುಂಬವು ಉಗ್ರಗಾಮಿಗಳಿಂದ ಅವರು ಅಪಹರಣಕ್ಕೊಳಗಾಗಿರುವ ಶಂಕೆಯಿದೆ ಅವರನ್ನು ಉಳಿಸಿಕೊಡಿ ಎಂದು ಮನವಿ ಮಾಡಿತ್ತು.
ಅವರು ಚಲಾಯಿಸುತ್ತಿದ್ದ ಕಾರನ್ನು ಕುಲ್ಗಾಮ್ ಜಿಲ್ಲೆಯ ಪರನ್ಹಾಲ್ ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದ್ದು, ರಕ್ತದ ಕುರುಹುಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾನಿ ಅವರನ್ನು ಲಡಾಖ್ನ ಲೇಹ್ ಜಿಲ್ಲೆಯಲ್ಲಿ ನಿಯೋಜಿಸಲಾಗಿತ್ತು.
ಮೈಮೇಲೆ ಅಂತಹ ಯಾವುದೇ ಗಾಯಗಳಿಲ್ಲ ಆದರೆ ಅವರು ಭಯಭೀತಗೊಂಡ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.