ಉಡುಪಿ : ಸಮುದ್ರ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿರುವ ಉಡುಪಿ ಶಿವಳ್ಳಿಯ ಸುಶಿ ಗ್ಲೋಬಲ್ ರಿಸರ್ಚ್ ಸೆಂಟರ್ ನ ಸಂಶೋಧಕ ವಿಜಯ್ ಕುಮಾರ್ ಹೆಗ್ಡೆ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದ್ದು ತನ್ನ ಆವಿಷ್ಕಾರದ ಸುಧಾರಿತ ಮತ್ತು ಹೆಚ್ಚು ಸಾಮರ್ಥ್ಯದ ಮೂರನೇ ಘಟಕ ನಿರ್ಮಿಸಿದ್ದಾರೆ.
ಈಗಾಗಲೇ ಎರಡು ಘಟಕಗಳನ್ನು ಸಮುದ್ರಕ್ಕೆ ಇಳಿಸಿ ಅಲೆಗಳಿಂದ ವಿದ್ಯುತ್ ಸಾದ್ಯ ಎಂದು ತೋರಿಸಿಕೊಟ್ಟಿರುವ ವಿಜಯ್ ಕುಮಾರ್ ಹೆಗ್ಡೆ ಇದೀಗ ನಿರಂತರ ನಲ್ಕು ಮನೆಗಳಿಗೆ ಸಾಕಾಗುವಷ್ಟು ಮುಂದಿನ ಮಳೆಗಾಳದವರೆಗೆ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಪ್ರಯತ್ನವನ್ನು ನಡೆಸಿದ್ದು ಇದಕ್ಕಾಗಿ ಹೆಚ್ಚು ಸಾಮರ್ಥ್ಯದ ಮೂರನೇ ಘಟಕವನ್ನು ಕೆಮ್ಮಣ್ಣುವಿನ ಕದಿಕೆ ಸಮುದ್ರದಲ್ಲಿ ನಿರ್ಮಿಸಲು ಸಜ್ಜಾಗಿದ್ದಾರೆ. ಅಲೆಗಳ ಅಬ್ಬರ ಕಡಿಮೆಯಾದರೆ ಮುಂದಿನ ತಿಂಗಳ ಕೊನೆಯ ಭಾಗದಲ್ಲಿ ಈ ಘಟಕ ಸ್ಥಾಪನೆ ಸಾದ್ಯವಾಗಲಿದೆ.
ಮೊದಲ ಘಟಕ ಪ್ರಾಥಮಿಕ ಪ್ರಯತ್ನವಾದರೆ , ಎರಡನೇ ಘಟಕದಿಂದ 1 ಕೆವಿ ವಿದ್ಯುತ್ ನ್ನು ಪ್ರಾಯೋಗಿಕವಾಗಿ ಉತ್ಪಾದಿಸಿ 20 ಬಲ್ಬ್ ಗಳನ್ನು ಉರಿಸಿದ್ದಾರೆ. ಇದೀಗ 5 ಕೆವಿ ಸಾಮರ್ಥ್ಯದ ಮೂರನೇ ಘಟಕ ಚಾಲನೆ ತಯಾರಿ ಮಾಡಿಕೊಂಡಿದ್ದು ಈ ಬಗ್ಗೆ ಮಾದ್ಯಮಕ್ಕೆ ತನ್ನ ಮೂರನೇ ಘಟಕದ ಬಗ್ಗೆ ವಿವರಣೆಗಳನ್ನು ನೀಡಿದರು.
3ನೇ ಘಟಕ ಹೆಚ್ಚು ಸುಧಾರಿತ ಮತ್ತು ಪೂರ್ಣ ಪ್ರಮಾಣದ್ದು ಈ ಹಿಂದಿನ ಘಟಕದಿಂದ ಉಬ್ಬರವಿದ್ದಾಗ ಮಾತ್ರ ವಿದ್ಯುತ್ ಉತ್ಪಾದನೆ ಸಾದ್ಯವಿತ್ತು. ಆದರೆ ಇದೀಗ ಸಿದ್ದವಾದ ಘಟಕದಿಂದ ಉಬ್ಬರ ಮತ್ತು ಇಳಿತ ಎರಡೂ ಸಾಂದರ್ಬದಲ್ಲಿಯೂ ವಿದ್ಯುತ್ ಉತ್ಪಾದಿಸಬಹುದು. ಇದರಿಂದ100-200 ಬಲ್ಬ್ ಗಳನ್ನು ಉರಿಸಬಹುದಾಗಿದ್ದು 5 ಮನೆಗಳಿಗೆ ಸಾಕಾಗುವಷ್ಟು ವಿದ್ಯುತ್ ದೊರೆಯುತ್ತದೆ ಎಂದು ವಿಜಯ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
ಅಲ್ಲದೇ ವಿಜಯ್ ಕುಮಾರ್ ಹೆಗ್ಡೆ ಅವರು ಗ್ಯಾಸ್ ಉಳಿತಾಯ ಒಲೆಯನ್ನು ಸಂಶೋಧಿಸಿದ್ದು ಇದನ್ನು ಹೊಲೇಟ್ ಗಳು ಅಳವಡಿಸಿಕಂಡರೆ ಶೇಕಡಾ 60 ರಷ್ಟು ಗ್ಯಾಸ್ ಉಳಿತಾಯವಾಗಲಿದೆ. ಇದರ ಬಗ್ಗೆಯೂ ವಿಜಯ್ ಕುಮಾರ್ ಹೆಗ್ಡೆ ಮಾದ್ಯಮಕ್ಕೆ ಮಾಹಿತಿ ನೀಡಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.