ನವದೆಹಲಿ: ಪಿಎಂಎವೈ (ನಗರ) ಅಡಿಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ 1.19 ಕೋಟಿ ಮನೆಗಳನ್ನು ಮಂಜೂರು ಮಾಡಿದೆ ಮತ್ತು 75 ಲಕ್ಷ ಮನೆಗಳನ್ನು ಈಗಾಗಲೇ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ‘ಕನೆಕ್ಟ್ ಕರೋ 2023’ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸ್ವಚ್ಛ ಭಾರತ್ ಮಿಷನ್ (ನಗರ) ಸ್ವಚ್ಛತೆಯ ಕಡೆಗೆ ದೇಶವ್ಯಾಪಿ ನಡವಳಿಕೆಯಲ್ಲಿ ಬದಲಾವಣೆಯನ್ನು ತಂದಿದೆ. ಘನತ್ಯಾಜ್ಯ ಸಂಸ್ಕರಣೆಯು 2014 ರಲ್ಲಿ ಶೇಕಡಾ 17 ರಿಂದ ಇಂದು ಶೇಕಡಾ 76 ಕ್ಕೆ ಏರಿದೆ ಎಂದು ಸಚಿವರು ಹೇಳಿದ್ದಾರೆ.
ಸುಮಾರು 73.6 ಲಕ್ಷ ವೈಯಕ್ತಿಕ ಮತ್ತು ಸಮುದಾಯ ಶೌಚಾಲಯಗಳ ನಿರ್ಮಾಣವು ನಗರಗಳು ಮತ್ತು ಪಟ್ಟಣಗಳನ್ನು ಬಯಲು ಶೌಚ ಮುಕ್ತಗೊಳಿಸಿದೆ ಎಂದು ಹೇಳಿದರು.
ನಗರ ಸಾರಿಗೆಯ ಕುರಿತು ಮಾತನಾಡಿದ ಪುರಿ, ಭಾರತವು 860-ಕಿಮೀ ಕಾರ್ಯಾಚರಣೆಯ ಮೆಟ್ರೋ ಮಾರ್ಗಗಳನ್ನು ಹೊಂದಿದೆ ಮತ್ತು ಸುಮಾರು 917 ಕಿಮೀ ನಿರ್ಮಾಣ ಹಂತದಲ್ಲಿದೆ. ಶೀಘ್ರದಲ್ಲೇ ನಾವು ವಿಶ್ವದ ಎರಡನೇ ಅತಿ ದೊಡ್ಡ ಮೆಟ್ರೋ ನೆಟ್ವರ್ಕ್ ಆಗಲಿದ್ದೇವೆ. ನಮ್ಮ ಮೆಟ್ರೋ ವ್ಯವಸ್ಥೆಯ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದು ಕಾರ್ಯಕ್ರಮದಲ್ಲಿ ಪುರಿ ಹೇಳಿರುವುದಾಗಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.