ನವದೆಹಲಿ: ಇಂದು ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನ. ಪ್ರತಿ ವರ್ಷ ಜುಲೈ 18ರಂದು ಮಂಡೇಲಾ ಅವರ ಜನ್ಮದಿನದಂದು ಈ ದಿನವನ್ನು ಆಚರಿಸಲಾಗುತ್ತದೆ. ನೆಲ್ಸನ್ ಮಂಡೇಲಾ ಗೌರವಾರ್ಥ ಈ ದಿನವನ್ನುಆಚರಿಸುವುದಾಗಿ ವಿಶ್ವಸಂಸ್ಥೆಯು ನವೆಂಬರ್ 2009 ರಲ್ಲಿ ಅಧಿಕೃತವಾಗಿ ಘೋಷಿಸಿತು.
ನೆಲ್ಸನ್ ಮಂಡೇಲಾ ಅವರು ಜುಲೈ 18, 1918 ರಂದು ದಕ್ಷಿಣ ಆಫ್ರಿಕಾದ ಟ್ರಾನ್ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ಟೆಂಬೂ ಬುಡಕಟ್ಟಿನ ನಾಯಕರಾಗಿದ್ದರು. ಮಂಡೇಲಾ ಅವರು ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿಯನ್ನು ಪಡೆದರು. ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಸೇರಿ ‘ನ್ಯಾಷನಲ್ ಪಾರ್ಟಿ’ ಸರ್ಕಾರದ ವರ್ಣಬೇಧ ನೀತಿಗಳ ವಿರುದ್ಧ ಹೋರಾಡಿದರು. ಸರ್ಕಾರವನ್ನು ಟೀಕಿಸಿದ ಅಪರಾಧಕ್ಕಾಗಿ ಅವರು ಅಪಾರ ವರ್ಷಗಳ ಕಾಲ ಜೈಲಿನಲ್ಲಿದ್ದರು ಕಾನೂನು ಸಮರ ನಡೆಸಿ, 1961ರಲ್ಲಿ ಜಯಗಳಿಸಿದರು.
ನೆಲ್ಸನ್ ಮಂಡೇಲಾ ಅವರು ಮಾನವ ಹಕ್ಕುಗಳ ಪ್ರತಿಪಾದಕರಾಗಿ, ದೀರ್ಘಕಾಲದ ಖೈದಿಯಾಗಿ, ಅಂತರರಾಷ್ಟ್ರೀಯ ಶಾಂತಿ ಪ್ರಚರಕರಾಗಿ ಮತ್ತು ಮುಕ್ತ ದಕ್ಷಿಣ ಆಫ್ರಿಕಾದ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಮೊದಲ ಅಧ್ಯಕ್ಷರಾಗಿ ಮಾನವೀಯತೆಯನ್ನು ಸಮರ್ಥಿಸಿದರು. ಶಾಂತಿ ಮತ್ತು ಸ್ವಾತಂತ್ರ್ಯದ ಸಂಸ್ಕೃತಿಗೆ ಮಂಡೇಲಾ ಅವರ ಕೊಡುಗೆಯನ್ನು ಗುರುತಿಸಲು, UN ಜನರಲ್ ಅಸೆಂಬ್ಲಿ ಜುಲೈ 18 “ನೆಲ್ಸನ್ ಮಂಡೇಲಾ ಅಂತರಾಷ್ಟ್ರೀಯ ದಿನ”ಎಂದು ಘೋಷಿಸಿತು.
ಮಂಡೇಲಾ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗುವ ಮೊದಲು, ದೇಶವು ವರ್ಣಭೇದ ನೀತಿ, ಜನಾಂಗೀಯ ಪ್ರತ್ಯೇಕತೆ ಮತ್ತು ತಾರತಮ್ಯದ ವ್ಯವಸ್ಥೆಯಿಂದ ಪೀಡಿತವಾಗಿತ್ತು. ಬಹುಸಂಖ್ಯಾತ ಕಪ್ಪು ಜನಸಂಖ್ಯೆಯು ಬಿಳಿಯ ಅಲ್ಪಸಂಖ್ಯಾತ ಸರ್ಕಾರದಿಂದ ತುಳಿತಕ್ಕೊಳಗಾಯಿತು. ಮಂಡೇಲಾ ಅವರು 1990 ರಲ್ಲಿ ಜೈಲಿನಿಂದ ಬಿಡುಗಡೆಯಾಗುವ ಮೊದಲು ರಾಜಕೀಯ ಖೈದಿಯಾಗಿ 27ವರ್ಷಗಳ ಕಾಲ ಜೈಲಿನಲ್ಲಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.