ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್ ಪ್ರವಾಸದ ವೇಳೆ 99 ವರ್ಷದ ಯೋಗ ಶಿಕ್ಷಕಿ ಚಾಲೋರ್ಚ್ ಚಾಪಿನ್ ಅವರನ್ನು ಭೇಟಿ ಮಾಡಿದ್ದಾರೆ. ತನ್ನ 50ನೇ ವಯಸ್ಸಿನಿಂದ ಯೋಗ ಮಾಡುತ್ತಿರುವ ಈ ಶಿಕ್ಷಕಿ ಯೋಗವನ್ನು ಪ್ರಚುರಪಡಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ ‘ಪ್ಯಾರಿಸ್ನಲ್ಲಿ ನನಗೆ ಚಾರ್ಲೋಟ್ ಚಾಪಿನ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. 50ನೇ ವಯಸ್ಸಿಗೆ ಯೋಗಾಭ್ಯಾಸ ಮಾಡುತ್ತಿರುವ ಅವರು ಶೀಘ್ರದಲ್ಲೇ 100 ವರ್ಷಕ್ಕೆ ಕಾಲಿಡುತ್ತಿದ್ದು ಆದರೆ ಯೋಗ ಮತ್ತು ಫಿಟ್ನೆಸ್ ಕುರಿತ ಅವರ ಉತ್ಸಾಹವು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ’ ಎಂದು ಶ್ಲಾಘಿಸಿದ್ದಾರೆ.
ಭಾರತ ಹಾಗೂ ಫ್ರಾನ್ಸ್ ಸಂಬಂಧ ಮುಂದಿನ 25 ವರ್ಷಗಳಲ್ಲಿ ಇನ್ನಷ್ಟು ಗಟ್ಟಿಗೊಳ್ಳಲಿದೆ. ರಕ್ಷಣಾ ಸಹಕಾರ ಈ ಬಾಂಧವ್ಯದಲ್ಲಿ ಶಕ್ತಿಶಾಲಿ ಆಧಾರಸ್ತಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ಯುದ್ಧವಿಮಾನಗಳು, ಜಲಾಂತರ್ಗಾಮಿ ಹಾಗೂ ಹೆಲಿಕಾಪ್ಟರ್ ಎಂಜಿನ್ ತಯಾರಿಕೆಯಲ್ಲಿ ಸಹಕಾರ ಮುಂದುವರಿಯಲಿದೆ ಎಂದಿದ್ದಾರೆ.
ಭಾರತವು ಈಗಾಗಲೇ ಫ್ರಾನ್ಸ್ನಿಂದ ನೌಕಾಪಡೆಗಾಗಿ 26 ರಫೇಲ್ ಯುದ್ಧವಿಮಾನ ಹಾಗೂ 3 ಸ್ಕಾರ್ಪೀನ್ ಜಲಾಂತರ್ಗಾಮಿ ಖರೀದಿಗೆ ಸಮ್ಮತಿಸಿದೆ. ಆದರೆ ಒಪ್ಪಂದದ ಮೊತ್ತದ ಬಗ್ಗೆ ಇನ್ನೂ ಮಾತುಕತೆ ನಡೆಸಿರುವ ಕಾರಣ ಈ ಬಗ್ಗೆ ನೇರವಾಗಿ ಘೋಷಣೆ ಮಾಡದೇ ಯುದ್ಧವಿಮಾನ ಹಾಗೂ ಜಲಾಂತರ್ಗಾಮಿ ವಿಷಯದಲ್ಲಿ ಸಹಕಾರ ಏರ್ಪಡಲಿದೆ ಎಂದಷ್ಟೇ ಮೋದಿ ಹೇಳಿದರು ಎಂದು ವಿಶ್ಲೇಷಿಸಲಾಗಿದೆ.
In Paris, I had the opportunity to meet the remarkable Charlotte Chopin. She began practising Yoga at the age of 50. She’s going to turn hundred soon but her passion towards Yoga and fitness has only increased over the years. pic.twitter.com/zrWkMMTck9
— Narendra Modi (@narendramodi) July 14, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.