ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಈ ವಾರ ‘ಲವ್ ಜಿಹಾದ್’ ನ ಇನ್ನೊಂದು ಪ್ರಕರಣ ವರದಿಯಾಗಿದೆ. ಆರೋಪಿಗಳು ಮತ್ತು ಕುಟುಂಬದವರು ತನ್ನನ್ನು ಹೇಗೆ ನೇಪಾಳದ ವೇಶ್ಯಾಗೃಹಕ್ಕೆ ಮಾರಾಟ ಮಾಡಿದ್ದಾರೆ ಎಂಬ ಸಂತ್ರಸ್ತೆಯ ವಿಡಿಯೋ ಹೇಳಿಕೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಕೇವಲ 18 ವರ್ಷ ವಯಸ್ಸಿನ ಹುಡುಗಿಯನ್ನು ಪುರುಷರ ತಂಡವು ಪದೇ ಪದೇ ಅತ್ಯಾಚಾರವೆಸಗಿದೆ. ಈ ಪ್ರಕರಣದ ಪ್ರಮುಖ ಆರೋಪಿಯನ್ನು ಹಟಾ ಪ್ರದೇಶದ ನಿವಾಸಿ ಅಮನ್ ಖಾನ್ ಎಂದು ಗುರುತಿಸಲಾಗಿದೆ. ಜುಲೈ 1 ರಂದು ಚಿಪ್ಸ್ ಖರೀದಿಸಲು ಹೊರಗೆ ಹೋದ ಬಳಿಕ ಅಪ್ರಾಪ್ತ ವಯಸ್ಕಳು ಕಾಣೆಯಾಗಿದ್ದಳು, ಅದೇ ದಿನ, ಆಕೆಯ ಪೋಷಕರು ಅಮನ್ ಖಾನ್ ವಿರುದ್ಧ ಅಪಹರಣದ ದೂರು ದಾಖಲಿಸಿದರು, ಆತ ಈ ಹಿಂದೆ ತಮ್ಮ ಮಗಳಿಗೆ ಬೆದರಿಕೆ ಹಾಕಿದ್ದ ಮತ್ತು ಆಕೆಯ ಅಪಹರಣಕ್ಕೆ ಕಾರಣರಾಗಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನ ನಂತರ, ಜುಲೈ 1 ರಂದು ಕುಶಿನಗರ ಜಿಲ್ಲೆಯ ಹಟಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ದೂರು ನೀಡಿದವರು ಸಂತ್ರಸ್ತೆಯ ತಾಯಿ ನೀಲಂ ಮಿಶ್ರಾ.
ಜುಲೈ 9 ರಂದು, ಕುಶಿನಗರ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದು, ಅಪಹರಣಗೊಂಡ ಬಾಲಕಿಯನ್ನು ಜುಲೈ4 ರಂದು ಸುರಕ್ಷಿತವಾಗಿ ಕರೆತರಲಾಗಿದೆ ಎಂದಿದ್ದಾರೆ. ಜುಲೈ 8 ರಂದು ಆರೋಪಿ ಅಮನ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದಿದ್ದಾರೆ. ಸ್ಟೇಷನ್ ಹೌಸ್ ಆಫೀಸರ್ ನಿರ್ಭಯ್ ಸಿಂಗ್ ಅವರು ಅಮನ್ ಖಾನ್ ಅಲ್ಲದೇ ಇತರ ಇಬ್ಬರು ಆರೋಪಿಗಳಾದ ಅಶುತೋಷ್ ವರ್ಮಾ ಮತ್ತು ಶಿವಂ ಮಿಶ್ರಾ ಅವರನ್ನು ಬಂಧಿಸಿದ್ದಾರೆ ಎಂದು ಹೇಳಿದರು. ಸಂತ್ರಸ್ತೆ ಜುಲೈ 6 ರಂದು CrPC ಯ ಸೆಕ್ಷನ್ 164 ರ ಅಡಿಯಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ ಮತ್ತು ನ್ಯಾಯಾಲಯವು ಅವಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದೆ.
ಸಂತ್ರಸ್ತೆಯ ವೀಡಿಯೊ ಹೇಳಿಕೆಯ ಪ್ರಕಾರ, ಆರೋಪಿ ಅಮನ್ ಖಾನ್ ಅವಳನ್ನು ಬಲವಂತವಾಗಿ ಅಪಹರಿಸಿ ನೇಪಾಳದ ವೇಶ್ಯಾಗೃಹಕ್ಕೆ ಮಾರಾಟ ಮಾಡಿದ್ದಾನೆ . ಆತ ಬಾಲಕಿಯನ್ನು ಹಿಂಬಾಲಿಸಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಹೇಳುತ್ತಿದ್ದ. ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಅವನು ಮತ್ತು ಅವನ ಸ್ನೇಹಿತರು ಅವಳನ್ನು ಅಪಹರಿಸಿ ಮಾರಾಟ ಮಾಡುವ ಮೊದಲು ಅತ್ಯಾಚಾರ ಮಾಡಿದ್ದಾರೆ.
ಬಾಲಕಿಯ ತಂದೆಯ ಪ್ರಕಾರ ಅಮನ್ ಖಾನ್ ಮೊದಲು ಹಿಂದೂ ಎಂದು ಪರಿಚಯಿಸಿಕೊಂಡು ಬಾಲಕಿಯ ಪರಿಚಯ ಮಾಡಿಕೊಂಡಿದ್ದಾನೆ. ಶಾಲೆಗೆ, ಕೋಚಿಂಗ್ಗೆ ಹೋಗುವಾಗ ಆಕೆಯನ್ನು ಹಿಂಬಾಲಿಸಿದ್ದಾನೆ ಮತ್ತು ಪ್ರೀತಿಯ ನಾಟಕವಾಡಿದ್ದಾನೆ. ಇದೇ ಕಾರಣಕ್ಕೆ ಬಾಳಕಿ ಎರಡು ಮೂರು ಬಾರಿ ಆತನನ್ನು ಭೇಟಿಯಾಗಿದ್ದಾಳೆ. ಆದರೆ ಬಳಿಕ ಆತನ ನಿಜವಾದ ಬಣ್ಣ ತಿಳಿದು ಆತನಿಂದ ಅಂತರ ಕಾಯ್ದುಕೊಂಡಿದ್ದಾಳೆ. ಇದರಿಂದ ಕುಪಿತನಾದ ಆತ ಆಕೆಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾನೆ. ಆಕೆಯ ವಿಡಿಯೋ, ಫೋಟೋ ಹಿಡಿದುಕೊಂಡು ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಮತ್ತು ಇಸ್ಲಾಂಗೆ ಮತಾಂತರವಾಗದಿದ್ದರೆ, ವಿಷಯವನ್ನು ಪೋಷಕರಿಗೆ ತಿಳಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಮಾಡುವ ಬೆದರಿಕೆ ಹಾಕಿದ್ದಾನೆ. ಗೋವನ್ನು ಕಡಿಯುವ ನಾವು ನಿನ್ನ ತಲೆ ಕಡಿಯಲು ಹೇಸುವುದಿಲ್ಲ ಎಂದು ಬೆದರಿಸಿದ್ದಾನೆ. ಆಕೆಗೆ ಆತ ಹಾಕಿದ ಬೆದರಿಕೆಗಳ ಸ್ಕ್ರೀನ್ ಶಾಟ್ಗಳನ್ನು ಕೂಡ ಆಕೆಯ ತಂದೆ ಬಹಿರಂಗಪಡಿಸಿದ್ದಾರೆ.
ಈ ಎಲ್ಲಾ ವಿಷಯವನ್ನು ಬಾಲಕಿ ಮನೆಯವರ ಬಳಿ ಹೇಳಿದ ಹಿನ್ನೆಲೆಯಲ್ಲಿ 2023ರ ಜೂನ್ 6ರಂದು ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕೊನೆಗೆ ಅಮನ್ ಖಾನ್ ಬಾಲಕಿಯ ಮನೆಯವರ ಕೈಕಾಲು ಹಿಡಿದು ಕ್ಷಮಾಪಣಾ ಪತ್ರ ಬರೆದು ಕೊಟ್ಟು ತನ್ನ ವಿರುದ್ಧದ ಪ್ರಕರಣ ಹಿಂಪಡೆಯುವಂತೆ ಮಾಡಿದ್ದ. ಆದರೆ ಕೆಲವು ದಿನಗಳ ಬಳಿಕ ಮತ್ತೆ ತನ್ನ ವರಸೆ ತೋರಿಸಿ ಆಕೆಗೆ ಬೆದರಿಕೆ ಹಾಕಿದ್ದಾನೆ. ನಿನ್ನ ತಂದೆಯ ಬ್ರೈನ್ ವಾಶ್ ಮಾಡಿ ಪ್ರಕರಣ ವಾಪಾಸ್ ಪಡೆಯುವಂತೆ ಮಾಡಿದ್ದೇನೆ, ಇನ್ನು ಏನು ಬೇಕಾದರು ನಾನು ಮಾಡಬಲ್ಲದೆ ಎಂದಿದ್ದಾನೆ. “ನೀವು ಇಸ್ಲಾಂ ಧರ್ಮವನ್ನು ಸ್ವೀಕರಿಸದೆ ನಿಮ್ಮ ಜೀವನದ ದೊಡ್ಡ ತಪ್ಪನ್ನು ಮಾಡಿದ್ದೀರಿ, ನಾನು ನಿಮ್ಮನ್ನು ಮುಸ್ಲಿಂ ಆಗಲು ಕೇಳುತ್ತಿದ್ದೇನೆ ಮತ್ತು ಅದರಲ್ಲಿ ನಿಮಗೆ ಸಮಸ್ಯೆ ಇದ್ದರೆ ನಾನು ನಿಮಗೆ ಮುಸ್ಲಿಮರ ಶಕ್ತಿಯನ್ನು ತೋರಿಸುತ್ತೇನೆ. ನಾವು ಮುಸ್ಲಿಮರು ಏನು ಮಾಡಬಹುದು ಎಂಬ ಸುದ್ದಿಯನ್ನು ನೀವು ಪರಿಶೀಲಿಸಿಲ್ಲವೇ? ಇಲ್ಲಿಯವರೆಗೆ ಯಾರೂ ಮಾಡದ ಕೆಲಸವನ್ನು ನಾನು ಮಾಡುತ್ತೇನೆ, ಮೊದಲು ನಾನು ನಿನ್ನನ್ನು ಬಲಾತ್ಕಾರ ಮಾಡುತ್ತೇನೆ ಮತ್ತು ನಂತರ ನಿನ್ನನ್ನು ಮಾರುತ್ತೇನೆ” ಎಂದು ಆತ ಹೇಳಿದ್ದಾನೆ.
ನನ್ನ ತಂದೆ ನನಗೆ ಬೆಂಬಲವಾಗಿ ಇದ್ದಾರೆ, ಅವರು ನಿನ್ನನ್ನು ಅತ್ಯಾಚಾರ ಮಾಡಿಯಾದರೂ ಸರಿ ಇಸ್ಲಾಂಗೆ ಮತಾಂತರ ಮಾಡು ಎಂದಿದ್ದಾರೆ ಎಂದು ಅಮನ್ ಬಾಲಕಿಗೆ ವಾಟ್ಸಾಪ್ ಸಂದೇಶ ಮಾಡಿದ್ದಾನೆ.
“ನಿಮಗೆ ಗೊತ್ತಿಲ್ಲ, ನಾವು ಎಷ್ಟು ಶ್ರೀಮಂತರು, ನಾನು ನಿನ್ನನ್ನು ಕೊಂದರೂ ನಾನು ಜೈಲಿನಿಂದ ಹೊರಬರಬಹುದು. ನಿಮ್ಮ ಮನೆಯವರಿಗೆ ಏನಾದರೂ ಹೇಳಿದರೆ ನಿಮ್ಮ ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸುತ್ತೇವೆ. ನಾನು ನಿಮ್ಮೆಲ್ಲರನ್ನೂ ಕೊಲ್ಲಬಲ್ಲೆ. ಒಂದೋ ಮುಸ್ಲಿಮ್ ಆಗು ಇಲ್ಲವೇ ನಿನ್ನನ್ನು ತುಂಡು ತುಂಡಾಗಿ ನೋಡಲು ಸಿದ್ಧಳಾಗು. ನಾವು ಮುಸ್ಲಿಮರು ನಿಮ್ಮನ್ನು ಹಿಂದೂಗಳನ್ನು ಹೇಗೆ ಕೊಲ್ಲುತ್ತಾರೆ ಎಂಬುದನ್ನು ಈಗ ಜನರು ನೋಡುತ್ತಾರೆ” ಎಂದಿದ್ದಾನೆ.
ಬಾಲಕಿ ಕುಟುಂಬ ಪ್ರಸ್ತುತ ವಾಸಿಸುತ್ತಿರುವ ಸ್ಥಳದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಖಾರ್ವಾ ಗ್ರಾಮದಲ್ಲಿ ಹಿಂದೆ ವಾಸಿಸುತ್ತಿತ್ತು. ಸುಮಾರು 15 ವರ್ಷಗಳ ಹಿಂದೆ ಅವರು ಹಟ, ವಾರ್ಡ್ ಸಂಖ್ಯೆ–25, ಇಂದಿರಾನಗರ ಪ್ರದೇಶಕ್ಕೆ ಬಂದು ನೆಲೆಸಿದ್ದಾರೆ. ಅವರ ಪ್ರದೇಶದಲ್ಲಿ ಹೆಚ್ಚಿನ ಕುಟುಂಬಗಳು ಮುಸ್ಲಿಮರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಬಹಳಷ್ಟು ಹಿಂದೂ ಹುಡುಗಿಯರು ಅಲ್ಲಿ ನಾಪತ್ತೆಯಾಗಿದ್ದಾರೆ. ಅವರೆಲ್ಲರೂ ಕೊಲ್ಲಲ್ಪಟ್ಟಿದ್ದಾರೆ ಎಂದು ಅವರ ಕುಟುಂಬದವರು ನಂಬಿದ್ದಾರೆ. ಬಾಲಕಿ ತಂದೆ ವೃತ್ತಿಯಲ್ಲಿ ಬಟ್ಟೆ ವ್ಯಾಪಾರಿ. ಅವರಿಗೆ ಇಬ್ಬರು ಮಕ್ಕಳು, ಒಬ್ಬ ಮಗ ಮತ್ತು ಮಗಳು. ಬಾಲಕಿ ದೊಡ್ಡವಳು, ಈ ವರ್ಷ 12ನೇ ತರಗತಿಯಲ್ಲಿ ಓದುತ್ತಿದ್ದಳು. ಅಮನ್ ತನ್ನ ಮಗಳಿಗೆ ಮಾಡಿದ ಅನ್ಯಾಯ ತಿಳಿದ ದಿನ ಅವರು ವಿಷ ಕುಡಿಯಲು ನಿರ್ಧರಿಸಿದ್ದರು. ಅವರು ಈ ಘಟನೆಯಿಂದ ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದಾರೆ ಮತ್ತು ಅವರ ಕಣ್ಣಲ್ಲಿ ಕಣ್ಣೀರಿನ ಜೊತೆಗೆ ಆರೋಪಿಗಳ ವಿರುದ್ಧ ಬುಲ್ಡೋಜರ್ ಡ್ರೈವ್ ಅನ್ನು ನಡೆಸಬೇಕೆಂಬ ಆಕ್ರೋಶವೂ ವ್ಯಕ್ತವಾಗಿದೆ.
ಅಪಹರಣದ ದಿನದ ಬಗ್ಗೆ ಮಾತನಾಡಿದ ಬಾಲಕಿ ತಂದೆ, ಮನೆಯಿಂದ ಹೊರಬಂದ ನಂತರ ಅನುಷಾಗೆ ಅಪರಿಚಿತ ವ್ಯಕ್ತಿಗಳಿಂದ ಕರೆ ಬಂದಿದ್ದು, ಅವರು ಕಪಟಗಂಜ್ ಪ್ರದೇಶದಲ್ಲಿ ನಿಮ್ಮ ತಂದೆ ಅಪಘಾತಕ್ಕೆ ಒಳಗಾಗಿದ್ದಾರೆ ಎಂದು ಆಕೆಗೆ ಹೇಳಿದರು. ಅವಳು ನಂಬದಿದ್ದಾಗ, ಅವರು ಅವಳ ತಂದೆಯ ಹೆಸರನ್ನು ಹೇಳಿ ರಸ್ತೆಯಲ್ಲಿ ಬಿದ್ದಿದ್ದಾರೆ ಎಂದು ನಂಬಿಸಿದರು.
ಅನುಷಾ ಸ್ಥಳಕ್ಕೆ ಧಾವಿಸಿದಾಗ ಅಮನ್ ಕಡೆಯವರು ಅವಳನ್ನು ವ್ಯಾನ್ಗೆ ಎಳೆದುಕೊಂಡು ಹೋಗಿ ಅವಳ ಮುಖದ ಮೇಲೆ ಕರವಸ್ತ್ರವನ್ನು ಮುಚ್ಚಿದ್ದಾರೆ, ಅವಳು ಎಚ್ಚರವಾದಾಗ ಅವಳು ನೇಪಾಳದ ವೇಶ್ಯಾಗೃಹದಲಿದ್ದಳು. ಅಲ್ಲೂ ಆಕೆಗೆ ಮತಾಂತರವಾಗಲು ಒತ್ತಡ ಹೇರಲಾಗಿತ್ತು. ಹೇಗೋ ತಪ್ಪಿಸಿಕೊಂಡು ಬಂದ ಬಾಲಕಿ ತನ್ನ ತಂದೆಗೆ ಮಾಹಿತಿ ನೀಡಿದ್ದಾಳೆ. ಅವರು ಪೊಲೀಸರಿಗೆ ಕರೆ ಮಾಡಿ ಬಾಲಕಿಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದಾರೆ. ಸದ್ಯ ಅಮನ್ ನನ್ನು ಬಂಧಿಸಲಾಗಿದ್ದು, ಆತನ ಕುಟುಂಬಸ್ಥರು ತಲೆಮರೆಸಿಕೊಂಡಿದೆ. ಆದರೆ ಆತನ ಫೇಸ್ಬುಕ್ ಖಾತೆ ಇನ್ನೂ ಕ್ರಿಯಾಶೀಲವಾಗಿದೆ. ಸಂತ್ರಸ್ತೆ ತನ್ನ ಕುಟುಂಬದೊಂದಿಗೆ ಸುರಕ್ಷಿತವಾಗಿದ್ದಾಳೆ.
ಮೂಲ ಲೇಖನ : Organiser
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.