ಉಡುಪಿ : ತಾನು ಶಾಸಕನಾಗಿ 2ವರ್ಷದ ಅವಧಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 21 ಸಾವಿರ ಪಡಿತರ ಕಾರ್ಡುಗಳನ್ನು ನೀಡುವ ಕಾರ್ಯ ಮಾಡಿದ್ದು ಈ ಮೂಲಕ 15ಸಾವಿರ ಬಿಪಿಎಲ್ ಹಾಗೂ 6 ಸಾವಿರ ಅಂತ್ಯೋದಯ ಕಾರ್ಡ್ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಶಾಸಕ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಡುಪಿ ಇದರ ವತಿಯಿಂದ ಅಜ್ಜರಕಾಡಿನ ಪುರಭವನದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ನ್ಯಾಯಬೆಲೆ ಅಂಗಡಿ ಮಟ್ಟದ ಜಾಗೃತಿ ಸಮಿತಿ ಸದಸ್ಯರ ಮತು ನ್ಯಾಯಬೆಲೆ ಅಂಗಡಿ ಮುಖ್ಯಸ್ಥರ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ತಾನು ಶಾಸಕ ನಾಗುವ ಮೊದಲು ಉಡುಪಿ ವಿಧಾನ್ಸಭಾ ಕ್ಷೇತ್ರದಲ್ಲಿ 63 ಸಾವಿರ ಎಪಿಎಲ್ ಕಾರ್ಡು,೩೮ ಸಾವಿರ ಬಿಪಿಎಲ್ ಹಾಗೂ 6ಸಾವಿರ ಅಂತೋದಯ ಕಾರ್ಡು ಇತ್ತು. ಅದರಾಲ್ಲಿ 602 ಶೇಕಡಾ ಭಾಗ ಎಪಿಎಲ್ ಇದ್ದಿದ್ದು ತಾನು ಶಾಸಕನಾದ ಎರಡು ವರ್ಷದಲ್ಲಿ ಅಂತ್ಯೋದಯ ಕಾರ್ಡ್ 6664 ಇದ್ದದ್ದು 12,286 ಕ್ಕೆ ಏರಿಸಿ ಪಲಾನುಭವಿಗಳಿಗೆ ನೀಡಲಾಗಿದೆ. 38,309ಬಿಪಿಎಲ್ ಕಾರ್ಡನ್ನು 53,626ಕ್ಕೆ ಏರಿಸಿ ನೀಡಲಾಗಿದೆ. ಈ ಮೂಲಕ 21 ಸಾವಿರ ಕಾರ್ಡ್ ನ್ನು ವಿತರಿಸುವ ಕಾರ್ಯ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಅಧಿಕಾರಿಯಾಗಿ ಉತ್ತಮ ಕಾರ್ಯ ನಡೆಸಿದ ನಿವೃತ್ತ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಸದಾಶಿವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ನಗರಸಭಾ ಅದ್ಯಕ್ಷ ಯುವರಾಜ್, ನಗರಾಭಿವೃದ್ದಿ ಪ್ರಾಧಿಕಾರಾ ಅದ್ಯಕ್ಷ ಜನಾರ್ಧನ್ ತೋನ್ಸೆ, ಸಾಬೂನು ಮತ್ತು ಮರ್ಜಕ ಮಂಡಳಿಯ ಅದ್ಯಕ್ಷೆ ವೆರೋನಿಕಾ ಕರ್ನೇಲಿಯೋ, ಜಿ.ಪಂ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರ್ತಿ, ನಗರಸಭಾ ಸದಸ್ಯ ರಮೇಶ್ ಕಾಂಚನ್, ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.