ಪಾಲ್ತಾಡಿ : ಸವಣೂರು ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚೆನ್ನಪ್ಪ ಗೌಡ ಮಾತನಾಡಿ ,ವರದಿ ಸಾಲಿನಲ್ಲಿ ಸಂಘವು 30.07 ಲಕ್ಷ ರೂ. ಲಾಭ ಗಳಿಸಿದೆ.ಆಡಿಟ್ ವರ್ಗೀಕರಣದೊಂದಿಗೆ 13ನೇ ಬಾರಿಗೆ ಸಂಘವು “ಎ”ದರ್ಜೆಯಲ್ಲಿದೆ.ವರದಿ ಸಾಲಿನಲ್ಲಿ ಸದಸ್ಯರಿಗೆ 34.52 ಕೋಟಿ ರೂ .ಸಾಲ ವಿತರಿಸಿ 23.20 ಕೋಟಿ ರೂ ಹೊರಸಾಲ ಬಾಕಿ ಇದ್ದು ವಾರ್ಷಿಕ 155.73 ಕೋಟಿ ರೂ. ವ್ಯವಹಾರ ನಡೆಸಿದೆ,ಸಂಘವು ಶೇ. 99.64 ಸಾಲ ವಸೂಲಾತಿ ಮಾಡಿದ್ದು ಸದಸ್ಯರಿಗೆ ಶೇ.೯ ಡೆವಿಡೆಂಡ್ ನೀಡಲಾಗುವುದು ಎಂದರು.
ಸಂಘವು ಸವಣೂರು ,ಪುಣ್ಚಪ್ಪಾಡಿ ,ಕುದ್ಮಾರು ,ಬೆಳಂದೂರು ಮತ್ತು ಕಾಮಣ ಗ್ರಾಮಗಳ ಕಾರ್ಯವ್ಯಾಪ್ತಿಯಲ್ಲಿ ವ್ಯವಹಾರ ನಡೆಸುತ್ತಿದ್ದು ಪ್ರಸಕ್ತ ವರ್ಷದ ಪ್ರಾರಂಭದಲ್ಲಿ 2759 ಸದಸ್ಯರಿದ್ದು 2.05 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ಮಾಸ್ ಸಂಸ್ಥೆಯ ಸಹಯೋಗದಲ್ಲಿ ಅಡಿಕೆ ಖರೀದಿ ನಡೆಸಲಾಗುತ್ತಿದೆ ಎಂದರು.
ಸಂಘದ ಗೋದಾಮಿನಿಂದ ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ಅಡಿಕೆ ಕಳವು ಪ್ರಕರಣದ ಕುರಿತು ಪೊಲೀಸ್ ಇಲಾಖೆಯಿಂದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ, ಸವಣೂರು ಬಂದ್ ನಡೆಸಿ ಎಚ್ಚರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಈ ಕುರಿತು ಸಂಘದ ನಿಯೋಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಡಿಮಾಡುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.
ಉಳಿದಂತೆ ಅಡಿಕೆ ದಾಸ್ತಾನು ಇರಿಸಲು ಸೂಕ್ತ ಗೋದಾಮು ವ್ಯವಸ್ಥೆ , ರಸಗೊಬ್ಬರ ಮಾರಾಟ ವ್ಯವಸ್ಥೆ , ಬೆಳಂದೂರು ಶಾಖೆಯಲ್ಲಿ ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರ ತೆರೆಯುವ ಕುರಿತು ಸದಸ್ಯರು ಬೇಡಿಕೆ ಇಟ್ಟರು. ಈ ಕುರಿತು ಮುಂದೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.ಸಭೆಯಲ್ಲಿ ಸವಣೂರು ಕೇ.ಸೀತಾರಾಮ ರೈ,ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು ,ಶೀನಪ್ಪ ಗೌಡ ಬೈತಡ್ಕ , ಲಕ್ಷ್ಮೀಶ ಗಾಂಭೀರ,ಸುರೇಶ್ ರೈ ಸೂಡಿಮುಳ್ಳು, ಜನಾರ್ಧನ್ ಆಚಾರ್ ಕಾಣಿಯೂರು, ಬಾಲಕೃಷ್ಣ ರೈ ,ಕೃಷ್ಣ ಕುಮಾರ್ ರೈ,ಕೇಶವ ಚಂದ್ರ ಸರ್ವೆ ಮತ್ತಿತರರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಗಣೇಶ್ ನಿಡ್ವಣ್ಣಾಯ, ನಿರ್ದೇಶಕರಾದ ಉದಯ ರೈ ಮಾದೋಡಿ, ಮಹಾಬಲ ಶೆಟ್ಟಿ ಕೊಮ್ಮಂಡ., ಕರುಣಾಕರ ಪೂಜಾರಿ ಪಟ್ಟೆ, ತಾರಾನಾಥ ಕಾಯರ್ಗ, ತಿಮ್ಮಪ್ಪ ಗೌಡ ಮುಂಡಾಳ, ನಾರಾಯಣ ಗೌಡ ಪೂವ, ಸೋಮನಾಥ ಕನ್ಯಾಮಂಗಲ, ವೇದಾವತಿ ಕೆಡೆಂಜಿ, ನಿರ್ಮಲ ಕೇಶವ ಗೌಡ ಅಮೈ ಉಪಸ್ಥಿತರಿದ್ದರು.
ಸಂಘದ ಶಾಖಾ ವ್ಯವಸ್ಥಾಪಕಿ ಕುಸುಮಾ ಪಿ.ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಸ್ವಾಗತಿಸಿ,ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.