ಬೆಂಗಳೂರು: ಕರ್ನಾಟಕ ಸರ್ಕಾರದ ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿ, ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ 2020-2021ರ ವಿಜೇತರ ಹೆಸರನ್ನು ಇಂದು ಪ್ರಕಟಿಸಲಾಗಿದೆ.
ಶ್ರೀ ಭಿಕೂಜಿ ರಾಮಜಿ ಇದಾತೆ ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಸದಾನಂದನ್ ಮಾಸ್ಟರ್ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಇದಾತೆ ಅವರು ಅಲೆಮಾರಿ ಸಮುದಾಯಗಳ ನಡುವಿನ ಹೋರಾಟಗಾರರು. ಮಹಾರಾಷ್ಟ್ರದಲ್ಲಿ ಅಲೆಮಾರಿ ಸಮುದಾಯಗಳಿಗೆ ಅಲ್ಲಿನ ಬಿಜೆಪಿ ಸರಕಾರ 3 ನೇ ಶೆಡ್ಯೂಲ್ ನಲ್ಲಿ ಪ್ರತ್ಯೇಕ ಮೀಸಲಾತಿ ಜಾರಿ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರು. ಕೇಂದ್ರ ಸರ್ಕಾರದ ಅಲೆಮಾರಿ, ಅರೆಅಲೆಮಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ, ಹಲವಾರು ಸುಧಾರಣೆಗಳ ಹರಿಕಾರರಾಗಿದ್ದಾರೆ.
ಸದಾನಂದನ್ ಮಾಸ್ಟರ್ ಅಹಿಂಸಾತ್ಮಕ ಸಾಮಾಜಿಕ ಆಂದೋಲನದ ಪ್ರತಿರೂಪವಾಗಿದ್ದಾರೆ. ಇವರು ಶಾಲಾ ಶಿಕ್ಷಕರಾಗಿದ್ದಾಗ ಯೌವನದ ದಿನಗಳಲ್ಲೇ ಕಮ್ಯುನಿಸ್ಟ್ ಹಿಂಸಾಚಾರಕ್ಕೆ ಬಲಿಯಾಗಿ ತನ್ನ ಎರಡೂ ಕಾಲುಗಳು ಕತ್ತರಿಸಲ್ಪಟ್ಟರೂ, ಧೃತಿಗೆಡದೆ ಸಜ್ಜನಿಕೆಯಿಂದ ನಾಡಿನಾದ್ಯಂತ ಎಂದಿನ ಮುಗುಳುನಗೆಯೊಂದಿಗೆ ಅವಿಶ್ರಾಂತವಾಗಿ ಸಾಮಾಜಿಕ ಚಟುವಟಿಕೆ ನಡೆಸಿದವರು. ಲಕ್ಷಾಂತರ ಮಂದಿಯೊಂದಿಗೆ ಅಕ್ಕರೆಯ ಬಾಂಧವ್ಯ ಹೊಂದಿದ್ದಾರೆ. ಶಾಂತಿಯುತ ಸಾಮಾಜಿಕ ಬದುಕಿನ ಮೂಲಕ ಅಹಿಂಸೆಯ ಆದರ್ಶವನ್ನು ಎತ್ತಿ ಹಿಡಿದ ಧೀಮಂತ ವ್ಯಕ್ತಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.