ಉಡುಪಿ : ಉಡುಪಿ ಜಿಲ್ಲೆಯನ್ನು ರಕ್ತದಾನಿಗಳ ಜಿಲ್ಲೆ ಎಂದು ಸರಕಾರದಿಂದ ಘೋಷಿಸುವ ಹಾಗೂ ಆರೋಗ್ಯ ಕಾರ್ಡ್ ಗಳ ವಿತರಣಾ ಸಮಾರಂಭ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಿತು.
ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ, ಮಣಿಪಾಲ ವಿವಿ ಇದರ ಆಶ್ರಯದಲ್ಲಿ ಉಡುಪಿ ಜಿಲ್ಲೆಯನ್ನು ರಕ್ತದಾನಿಗಳ ಜಿಲ್ಲೆ ಎಂದು ಘೋಷಿಸುವ ಹಾಗೂ ಆರೋಗ್ಯ ಸುರಕ್ಷಾ ಕಾರ್ಡುಗಳ ವಿತರಣಾ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಬೈಂದೂರು ಶಾಸಕ ಗೋಪಾಲ ಪೂಜಾರಿ ಉದ್ಘಾಟಿಸಿದರು. ಈ ವರ್ಷ ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ಹಾಗೂ ಮಣಿಪಾಲ ಆಸ್ಪತ್ರೆಯ ಸಹಯೋಗದೊಂದಿಗೆ 25 ಸಾವಿರ ಕಾರ್ಡುಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿದ್ದು ಸಾಂಕೇತಿಕವಾಗಿ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಫಲಾನುಭವಿಗಳಿಗೆ ವಿತರಿಸಿದರು.
ಇತ್ತೀಚಿನ ದಿನಗಳಲ್ಲಿ ಅನೇಕ ಆರೋಗ್ಯದ ಸಮಸ್ಯೆಗಳು ಕಾಡುತ್ತಿದ್ದು ಈ ಆರೋಗ್ಯದ ಸಮಸ್ಯೆಗೆ ರಕ್ಷಣಾ ಕವಚವಾಗಿ ಜಿ.ಶಂಕರ್ ಅವರು ತಮ್ಮ ಸೇವೆಯ ಮೂಲಕ ಈ ಕಾರ್ಡ್ ಗಳನ್ನು ನೀಡುತ್ತಿದ್ದು ಕಳೆದ ವರ್ಷ ಪ್ರತೀ ಕಾರ್ಡ್ ಗೆ ನೀಡುತ್ತಿದ್ದ 30 ಸಾವಿರ ಮೊತ್ತವನ್ನು ಈ ಬಾರಿ 50 ಸಾವಿರಕ್ಕೆ ಹೆಚ್ಚಿಸಿದ್ದು ಈ ಮೂಲಕ ಹಬ್ಬಕ್ಕೆ ಕೊಡುಗೆ ನೀಡಿದ್ದಾರೆ ಎಂದರು. ಪ್ರತೀ ವರ್ಷ ಮೊಗವೀರ ಯುವ ಸಂಘಟನೆಯ ಮೂಲಕ ಜಿಲ್ಲೆಯಲ್ಲಿ ಅತೀ ಹೆಚ್ಚು ರಕದಾನದ ಮೂಲಕ ರಕ್ತ ಸಂಗ್ರಹಿಸುತ್ತಿದ್ದು ಇಡೀ ರಾಜ್ಯಕ್ಕೆ ಪ್ರಥಮ ಹಾಗೂ ಮಾದರಿಯಾಗಿ ಉಡುಪಿ ಜಿಲ್ಲೆ ಮೂಡಿ ಬಂದಿದೆ.
ಈ ಕಾರ್ಯ ಇತರ ಜಿಲ್ಲೆಯಗಳಲ್ಲೂ ಆಗಬೇಕು ಎನ್ನುವ ನಿಟ್ಟಿನಲ್ಲಿ ಸರಕಾರ ಉಡುಪಿ ಜಿಲ್ಲೆಯನ್ನು ರಕ್ತದಾನಿಗಳ ಜಿಲ್ಲೆ ಎಂದು ಘೋಷಣೆ ಮಾಡಿದ್ದು ಆರೋಗ್ಯ ಸಚಿವ ಯು.ಟಿ. ಖಾದರ್ ರಕ್ತದಾನಿಗಳ ಜಿಲ್ಲೆ ಎಂದು ಘೋಷಿಸಿಸುವ ಪ್ರಮಾಣ ಪತ್ರವನ್ನು ಜಿ.ಶಂಕರ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯು.ಟಿ. ಖಾದರ್ ನಿಜವಾದ ದೇವರ ಸೇವೆ ಎಂದರೆ ಇತರರಿಗೆ ಸಹಾಯ ಮಾಡೋದು. ಇಂತಹ ಮಹತ್ಕಾರ್ಯವನ್ನು ಜಿ.ಶಂಕರ್ ಅವರು ಮಾಡಿದ್ದು ನಿಜವಾದ ದೇವರ ಸೇವೆಗೆ ಪಾತ್ರರಾಗಿದ್ದಾರೆ.
ಸರಕಾರ ಅನೇಕ ಯೋಜನೆಗಳು ಕೂಡಾ ಬಡವರಿಗೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದರು. ಸಮಾರಂಭದಲ್ಲಿ ಜಿಶಂಕರ್ ಪ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಜಿ.ಶಂಕರ್, ಶಾಸಕ ಪ್ರಮೋದ್ ಮದ್ವರಾಜ್, ಜಿ.ಪಂ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್, ನಗರಸಭಾ ಅಧ್ಯಕ್ಷ ಯುವರಾಜ್, ಮಣಿಪಾಲ ವಿವಿ ರಿಜಿಸ್ಟಾರ್ ಜಿ.ಕೆ ಪ್ರಭು, ಮೊಗವೀರ ಮಹಾಜನ ಸಂಘದ ಅದ್ಯಕ್ಷ ಕೇಶವ್ ಕುಂದರ್, ಉದ್ಯಮಿ ಆನಂದ್ ಸಿ ಕುಂದರ್, ಮೀನು ಮಾರಾಟಗಾರರ ಫೆಡರೇಶನ್ ಅದ್ಯಕ್ಷ ಯಶಪಾಲ್ ಸುವರ್ಣ, ಮೊಗವೀರ ಮಹಾಜನ ಸಂಘ ಕುಂದಾಪುರದ ಎಂ.ಎಂ ಸುವರಣ, ಮೊಗವೀರ ಯುವ ಸಂಘಟನೆಯ ಅದ್ಯಕ್ಷ ಸದಾನಂದ ಬಳ್ಕೂರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.