News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊಪ್ಪಳ ಗವಿಮಠಕ್ಕೆ ಅಸ್ಸಾ ಸಿಎಂ ಭೇಟಿ, ಬಿಜೆಪಿ ರೋಡ್‌ ಶೋನಲ್ಲಿ ಭಾಗಿ

ಕೊಪ್ಪಳ: ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಇಂದು ಕೊಪ್ಪಳಕ್ಕೆ ಭೇಟಿ ನೀಡಿದ್ದಾರೆ. ವಿಧಾನಸಭಾ ಚುನಾವಣೆಯ ಪ್ರಸಾರಕ್ಕಾಗಿ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ.

ಕೊಪ್ಪಳದ ಪ್ರಸಿದ್ಧ ಗವಿಮಠಕ್ಕೆ ಆಗಮಿಸಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರೊಂದಿಗೆ ಕೆಲಕಾಲ ಮಾತನಾಡಿದ ಶರ್ಮಾ ಅವರು, ಮಠದ ಪರಂಪರೆ,‌ ಇತಿಹಾಸ, ಜಾತ್ರೆಯ ವಿಶೇಷತೆ, ಜಾತ್ರೆಗೆ ಬರುವ ಭಕ್ತರಿಗೆ ಊಟದ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ವ್ಯವಸ್ಥೆ ಹೀಗೆ ಹಲವು ಮಾಹಿತಿಗಳನ್ನು ಸ್ವಾಮೀಜಿಗಳಿಂದ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ ಸ್ವಾಮೀಜಿಯವರು ಶರ್ಮಾ ಅವರಿಂದ ಅಸ್ಸಾಂನ ವಾತಾವರಣ ಅಲ್ಲಿನ ಜನರ ಬಗ್ಗೆ ತಿಳಿದುಕೊಂಡರು ಎನ್ನಲಾಗಿದೆ.

ಇದೆ ವೇಳೆ ಅಸ್ಸಾಂಗೆ ಆಗಮಿಸುವಂತೆ ಸ್ವಾಮೀಜಿಗಳಿಗೆ ಶರ್ಮಾ ಅವರು ಆಹ್ವಾನ ನೀಡಿದ್ದಾರೆ.

ಶರ್ಮಾ ಅವರು ಇಂದು ಗಂಗಾವತಿಯಲ್ಲಿ ಆಯೋಜನೆಗೊಂಡಿರುವ ಬಿಜೆಪಿ ರೋಡ್ ಶೋ ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top