News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪುಣೆಯಲ್ಲಿ 10,000 ಕೋಟಿ ರೂ ಹೂಡಿಕೆಯಲ್ಲಿ EV ಉತ್ಪಾದನಾ ಘಟಕ ಸ್ಥಾಪಿಸಲಿದೆ ಮಹೀಂದ್ರಾ


ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ತನ್ನ 10,000 ಕೋಟಿ ರೂಪಾಯಿಗಳ ಎಲೆಕ್ಟ್ರಿಕ್ ವಾಹನ (EV) ಉತ್ಪಾದನಾ ಘಟಕವನ್ನು ಸ್ಥಾಪಿಸುವುದಾಗಿ ಮಹೀಂದ್ರಾ & ಮಹೀಂದ್ರಾ ಇಂದು ಘೋಷಿಸಿದೆ.

ವಾಹನ ತಯಾರಕ ಕಂಪನಿಯಾದ ಮಹೀಂದ್ರಾ & ಮಹೀಂದ್ರಾ ಈ ಬಗ್ಗೆ ಹೇಳಿಕೆ ನೀಡಿ, “ಎಲೆಕ್ಟ್ರಿಕ್ ವಾಹನಗಳಿಗಾಗಿ 10,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಹಾರಾಷ್ಟ್ರ ಸರ್ಕಾರದ ಎಲೆಕ್ಟ್ರಿಕ್ ವಾಹನಗಳಿಗೆ ಕೈಗಾರಿಕಾ ಉತ್ತೇಜನ ಯೋಜನೆಯಡಿಯಲ್ಲಿ ಅನುಮೋದಿಸಲಾಗಿದೆ” ಎಂದು ಘೋಷಿಸಿದೆ.

“ಕಂಪನಿಯು ತನ್ನ ಅಂಗಸಂಸ್ಥೆಯ ಮೂಲಕ ಮಹೀಂದ್ರಾ ಬಾರ್ನ್ ಎಲೆಕ್ಟ್ರಿಕ್ ವೆಹಿಕಲ್ಸ್ (BEVs) ಹೆಸರಿನ ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನಾ ಸೌಲಭ್ಯ, ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಸ್ಥಾಪಿಸಲು 7-8 ವರ್ಷಗಳ ಅವಧಿಯಲ್ಲಿ ಸುಮಾರು 10,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಲಿದೆ” ಎಂದು   ಹೇಳಿಕೆ ತಿಳಿಇದೆ.

ಈ ವರ್ಷ ಆಗಸ್ಟ್ 15 ರಂದು ಮಹೀಂದ್ರಾ ತನ್ನ ಕೆಲವು BEV ವಾಹನಗಳನ್ನು ಯುಕೆನಲ್ಲಿ ಪ್ರದರ್ಶಿಸಿತ್ತು.

ಪ್ರಕಟಣೆಯ ಕುರಿತು ಮಾತನಾಡಿದ ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ನ ಆಟೋ ಮತ್ತು ಫಾರ್ಮ್ ವಲಯಗಳ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್, “ಸರಕಾರದ ಈ ಅನುಮೋದನೆಯಿಂದ ನಾವು ಸಂತೋಷಪಡುತ್ತೇವೆ. ಪುಣೆಯಲ್ಲಿ ನಮ್ಮ ಇವಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮತ್ತು‘ತವರು’ ರಾಜ್ಯದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಿದ ಮಹಾರಾಷ್ಟ್ರಕ್ಕೆ ಧನ್ಯವಾದ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top