ನ್ಯೂಯಾರ್ಕ್: ಭಾರತದಲ್ಲಿ ಸದ್ದು ಮಾಡಿದ್ದ ಹಿಜಾಬ್ ವಿಷಯ ಇದೀಗ ಇರಾನಿನಲ್ಲಿ ತಲ್ಲಣವನ್ನೇ ಸೃಷ್ಟಿ ಮಾಡುತ್ತಿದೆ. ಅಲ್ಲಿನ ಮಹಿಳೆಯರು ಹಿಜಾಬ್ ವಿರುದ್ಧ ಸಮರವನ್ನೇ ಸಾರಿದ್ದಾರೆ. ಈ ನಡುವೆಯೇ ಪತ್ರಕರ್ತೆ ಹಿಜಾಬ್ ಧರಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಇರಾನಿನ ಅಧ್ಯಕ್ಷ ಸಂದರ್ಶನವನ್ನೇ ರದ್ದುಗೊಳಿಸಿದ್ದಾರೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅಮೆರಿಕದ ಪತ್ರಕರ್ತೆ ಸ್ಟಿಯಾನೆ ಅಮನ್ಪೋರ್ ಅವರ ಜೊತೆ ಸಂದರ್ಶನದಲ್ಲಿ ಭಾಗಿಯಾಗಬೇಕಾಗಿತ್ತು. ಆದರೆ, ಪತ್ರಕರ್ತೆ ಹಿಜಾಬ್ ಹಾಕಿಲ್ಲ ಎಂಬ ಕಾರಣಕ್ಕಾಗಿ ಸಂದರ್ಶನ ರದ್ದುಗೊಳಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನ ನಡೆಯುತ್ತಿದ್ದು, ಅದರಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ಅಮನ್ಪೋರ್ ಜೊತೆ ಸಂದರ್ಶನವೊಂದಕ್ಕೆ ಅವರನ್ನು ಆಹ್ವಾನಿಸಲಾಗಿತ್ತು.
ಇರಾನ್ ಅಧ್ಯಕ್ಷ ಇಬ್ರಾಹಿಂಗಾಗಿ ಸುಮಾರು 40 ನಿಮಿಷಗಳ ಕಾಲ ನಾನು ಸಂದರ್ಶನಕ್ಕಾಗಿ ಕಾದು ಕುಳಿತಿದ್ದೇನೆ. ಹಿಜಾಬ್ ಧರಿಸುವಂತೆ ಸಹಾಯಕರ ಬಳಿ ಹೇಳಿ ಇಬ್ರಾಹಿಂ ಹೇಳಿ ಕಳುಹಿಸಿದ್ದರು, ಆದರೆ ಅದನ್ನು ವಿನಂಬ್ರವಾಗಿ ನಿರಾಕರಿಸಿದೆ, ಹಾಗಾಗಿ ಅವರು ಇಂಟರ್ವ್ಯೂ ನೀಡದೆ ಹೋಗಿದ್ದಾರೆ. ನ್ಯೂಯಾರ್ಕ್ನಲ್ಲಿ ಹಿಜಾಬ್ಗೆ ಸಂಬಂಧಿಸಿದಂತೆ ಯಾವುದೇ ನಿಯಮವಿಲ್ಲ. ಹೀಗಾಗಿ ಅದನ್ನು ಧರಿಸುವುದು ನನಗೆ ಅನಿವಾರ್ಯವಲ್ಲ ಎಂದು ನಿರೂಪಕಿ ಹೇಳಿದ್ದಾರೆ.
ಅಲ್ಲದೇ ಇರಾನ್ ನೆಲದಲ್ಲಿ ಸಂದರ್ಶನ ನಡೆಸಿದ್ದ ಸಂದರ್ಭದಲ್ಲಿ ನಿಯಮಕ್ಕೆ ಬದ್ಧಳಾಗಿ ಹಿಜಾಬ್ ಧರಿಸಿದ್ದೆ ಎಂದಿದ್ದಾರೆ.
“ಇಡೀ ವಿಶ್ವವೇ ಇರಾನ್ ಅಧ್ಯಕ್ಷರ ಅಮಾನವೀಯ ಮುಖವನ್ನು ನೋಡುತ್ತಿದೆ. ಅವರು ಪ್ರಪಂಚದ ಮುಂದೆ ತಮ್ಮ ದೇಶದ ಉತ್ತಮ ಚಿತ್ರಣವನ್ನು ಇಟ್ಟುಕೊಳ್ಳುವ ಬದಲು ಸಂಪ್ರದಾಯವಾದಿ ಚಿಂತನೆಗೆ ಬದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ” ಎಂದು ನಿರೂಪಕಿ ಟ್ವೀಟ್ ಮಾಡಿದ್ದಾರೆ.
ಪತ್ರಕರ್ತೆ ಅಮನ್ಪೋರ ಅವರ ತಂದೆ ಇರಾನ್ ಮೂಲದವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.