ನವದೆಹಲಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಮತ್ತು ತಡೆಗಟ್ಟಲು ಆರಂಭಿಸಿರುವ ಉಪಕ್ರಮಕ್ಕಾಗಿ ಭಾರತವು ವಿಶ್ವಸಂಸ್ಥೆಯ ಪ್ರಶಸ್ತಿಯನ್ನು ಗೆದ್ದಿದೆ. ಇದು ಅಧಿಕ ರಕ್ತದೊತ್ತಡದ ವಿರುದ್ಧದ ಭಾರತದ ಪ್ರಯತ್ನಗಳಿಗೆ ಸಂದ ಬಹುದೊಡ್ಡ ಮನ್ನಣೆಯಾಗಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿನ ದೊಡ್ಡ ಪ್ರಮಾಣದ ಅಧಿಕ ರಕ್ತದೊತ್ತಡ ನಿಯಂತ್ರಣ ಉಪಕ್ರಮ ʼಇಂಡಿಯಾ ಹೈಪರ್ ಟೆನ್ಷನ್ ಕಂಟ್ರೋಲ್ ಇನಿಶಿಯೇಟಿವ್ (IHCI)ʼ ಭಾರತದ ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯಲ್ಲಿ ಅಸಾಧಾರಣ ಕೆಲಸಕ್ಕಾಗಿ ಗುರುತಿಸಲ್ಪಟ್ಟಿದೆ.
ನಿನ್ನೆ ನ್ಯೂಯಾರ್ಕ್ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿ ಸೈಡ್ ಈವೆಂಟ್ನಲ್ಲಿ ಭಾರತವು “IHCI ‘2022 UN ಇಂಟರ್ಯಾಜೆನ್ಸಿ ಟಾಸ್ಕ್ ಫೋರ್ಸ್ ಆಂಡ್ WHO ಸ್ಪೆಷಲ್ ಪ್ರೋಗ್ರಾಂ ಆನ್ ಪ್ರೈಮರಿ ಹೆಲ್ತ್ ಕೇರ್ ಅವಾರ್ಡ್’ ಅನ್ನು ಗೆದ್ದಿದೆ. ಈ ಪ್ರಶಸ್ತಿಯು ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಮತ್ತು ಸಮಗ್ರ ಜನ-ಕೇಂದ್ರಿತ ಪ್ರಾಥಮಿಕ ಆರೈಕೆಯನ್ನು ನೀಡಲು ಭಾರತದ ಅತ್ಯುತ್ತಮ ಬದ್ಧತೆ ಮತ್ತು ಕ್ರಮವನ್ನು ಗುರುತಿಸುತ್ತದೆ.
ಈ ಉಪಕ್ರಮವನ್ನು 2017 ರಲ್ಲಿ ಪ್ರಾರಂಭಿಸಲಾಯಿತು ಮತ್ತು 23 ರಾಜ್ಯಗಳಾದ್ಯಂತ 130 ಕ್ಕೂ ಹೆಚ್ಚು ಜಿಲ್ಲೆಗಳನ್ನು ಒಳಗೊಳ್ಳಲು ಹಂತ ಹಂತವಾಗಿ ವಿಸ್ತರಿಸಲಾಯಿತು. ಉಪಕ್ರಮದ ಅಡಿಯಲ್ಲಿ, ಅಧಿಕ ರಕ್ತದೊತ್ತಡ ಹೊಂದಿರುವ 34 ಲಕ್ಷಕ್ಕೂ ಹೆಚ್ಚು ಜನರು ಆಯುಷ್ಮಾನ್ ಭಾರತ್ ಆರೋಗ್ಯ ಸ್ವಾಸ್ಥ್ಯ ಕೇಂದ್ರಗಳು ಸೇರಿದಂತೆ ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
India wins an @UN award for "India Hypertension Control Initiative (IHCI)" – a large scale hypertension intervention within existing primary healthcare system under National Health Mission.
IHCI has strengthened PM @NarendraModi Ji's mission to ensure health & wellness for all.
— Dr Mansukh Mandaviya (@mansukhmandviya) September 21, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.