ನವದೆಹಲಿ: ಸೆರ್ಬಿಯಾದ ಬೆಲ್ಗ್ರೇಡ್ನಲ್ಲಿ ಬುಧವಾರ ನಡೆದ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನ 53 ಕಿಲೋಗ್ರಾಂ ವಿಭಾಗದಲ್ಲಿ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ.
ಈ ಮೂಲಕ ವಿಶ್ವ ಚಾಂಪಿಯನ್ಶಿಪ್ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದಾರೆ. ಅವರು ಈ ಹಿಂದೆ ಕಝಾಕಿಸ್ತಾನ್ನ ನೂರ್-ಸುಲ್ತಾನ್ನಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ 2019 ರಲ್ಲಿ ಪದಕವನ್ನು ಗಳಿಸಿದ್ದರು.
ಕಾಮನ್ವೆಲ್ತ್ ಗೇಮ್ಸ್ 2022 ರ ಚಿನ್ನದ ಪದಕ ವಿಜೇತೆಯಾಗಿರುವ ಫೋಗಟ್ ಯುರೋಪಿಯನ್ ಚಾಂಪಿಯನ್ ಸ್ವೀಡನ್ನ ಎಮ್ಮಾ ಮಾಲ್ಮ್ಗ್ರೆನ್ ಅವರನ್ನು ಸೋಲಿಸಿ ಪದಕಕ್ಕೆ ಮುತ್ತಿಕ್ಕಿದ್ದಾರೆ. 8-0 ಅಂತರದಿಂದ ಸೋಲಿಸಿದ್ದು ವಿಶೇಷವಾಗಿತ್ತು.
ವಿನೇಶ್ ಸೆಪ್ಟೆಂಬರ್ 13, ಮಂಗಳವಾರದ ತನ್ನ ಮೊದಲ ಪಂದ್ಯದಲ್ಲಿ ಮಂಗೋಲಿಯಾದ ಖುಲಾನ್ ಬತ್ಖುಯಾಗ್ ವಿರುದ್ಧ ಸೋತ ನಂತರ ರೆಪೆಚೇಜ್ ಸುತ್ತಿನ ಮೂಲಕ ಕಂಚಿನ ಪ್ಲೇ-ಆಫ್ಗೆ ಪ್ರವೇಶಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.