ನವದೆಹಲಿ: ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ನಲ್ಲಿ ವಿವಿಧ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ತೆರೆಯಲಾಗಿದೆ.
ಪಾರದರ್ಶಕತೆಯನ್ನು ತರುವ ಸಲುವಾಗಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳು/ಏಜೆನ್ಸಿಗಳ ಎಲ್ಲಾ ಪ್ರಶಸ್ತಿಗಳನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಸಾಮಾನ್ಯ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ (https://awards.gov.in) ಅನ್ನು ಸರ್ಕಾರವು ವಿನ್ಯಾಸಪಡಿಸಿದೆ.
ಈ ಪೋರ್ಟಲ್ ಭಾರತ ಸರ್ಕಾರದಿಂದ ಸ್ಥಾಪಿಸಲಾದ ವಿವಿಧ ಪ್ರಶಸ್ತಿಗಳಿಗೆ ವ್ಯಕ್ತಿಗಳು/ಸಂಸ್ಥೆಗಳನ್ನು ನಾಮನಿರ್ದೇಶನ ಮಾಡಲು ಪ್ರತಿಯೊಬ್ಬ ನಾಗರಿಕರು ಅಥವಾ ಸಂಸ್ಥೆಗಳಿಗೆ ಅನುವು ಮಾಡಿಕೊಡುತ್ತದೆ..
ಪ್ರಸ್ತುತ, ಈ ಕೆಳಗಿನ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ಶಿಫಾರಸುಗಳು ತೆರೆಯಲಾಗಿದೆ
ಪದ್ಮ ಪ್ರಶಸ್ತಿಗಳು- ಕೊನೆಯ ದಿನಾಂಕ 15/09/2022
ಡಿಜಿಟಲ್ ಇಂಡಿಯಾ ಅವಾರ್ಡ್ಸ್ 2022- ಕೊನೆಯ ದಿನಾಂಕ 15/09/2022
ಅರಣ್ಯದಲ್ಲಿ ಶ್ರೇಷ್ಠತೆಗಾಗಿ ರಾಷ್ಟ್ರೀಯ ಪ್ರಶಸ್ತಿ 2022- ಕೊನೆಯ ದಿನಾಂಕ 30/09/2022
ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿ 2022- ಕೊನೆಯ ದಿನಾಂಕ 30/09/2022
ರಾಷ್ಟ್ರೀಯ ಜಲ ಪ್ರಶಸ್ತಿಗಳು 2022-ಕೊನೆಯ ದಿನಾಂಕ 15/09/2022
ನಾರಿ ಶಕ್ತಿ ಪುರಸ್ಕಾರ 2023- ಕೊನೆಯ ದಿನಾಂಕ 31/10/2022
ಸುಭಾಷ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರ 2023- ಕೊನೆಯ ದಿನಾಂಕ 30/09/2022
ಜೀವನ್ ರಕ್ಷಾ ಪದಕ – ಕೊನೆಯ ದಿನಾಂಕ 30/09/2022
ಹೆಚ್ಚಿನ ವಿವರಗಳಿಗಾಗಿ ಮತ್ತು ನಾಮನಿರ್ದೇಶನಗಳಿಗಾಗಿ ರಾಷ್ಟ್ರೀಯ ಪುರಸ್ಕರ್ ಪೋರ್ಟಲ್ (https://awards.gov.in) ಗೆ ಭೇಟಿ ನೀಡಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.