ನವದೆಹಲಿ: ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಅದಕ್ಕೆ ಮಂಗಳೂರಿನಲ್ಲಿ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮೋದಿ ಇಂದು ಟ್ವಿಟ್ ಮಾಡಿದ್ದಾರೆ.
“ನಾಳೆ, ಸೆಪ್ಟೆಂಬರ್ 2 ರಂದು ನಾನು ಮಂಗಳೂರಿನ ನನ್ನ ಸಹೋದರಿಯರು ಮತ್ತು ಸಹೋದರರ ಜೊತೆ ಸೇರಲು ಎದುರು ನೋಡುತ್ತಿದ್ದೇನೆ. ರೂ. 3,800 ಕೋಟಿಯ ಪ್ರಮುಖ ಯೋಜನೆಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ನಡೆಯಲಿದೆ. ಈ ಪ್ರಮುಖ ಕೆಲಸಗಳು ಯಾಂತ್ರೀಕರಣ ಮತ್ತು ಕೈಗಾರಿಕೀಕರಣಕ್ಕೆ ಸಂಬಂಧಿಸಿವೆ” ಎಂದು ಮೋದಿ ಟ್ವಿಟ್ನಲ್ಲಿ ತಿಳಿಸಿದ್ದಾರೆ.
ಇಂದು ಮೋದಿ ಕೇರಳಕ್ಕೆ ಆಗಮಿಸಿದ್ದು, ಅಲ್ಲಿ ಅವರು ಕೊಚ್ಚಿ ಮೆಟ್ರೋ ಯೋಜನೆಯ ಎರಡನೇ ಹಂತಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ ಮತ್ತು ಕೊಚ್ಚಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಎಸ್ಎನ್ ಜಂಕ್ಷನ್ ಮತ್ತು ವಡಕ್ಕೆಕೋಟಾವನ್ನು ಸಂಪರ್ಕಿಸುವ ಮೊದಲ ಹಂತದ ವಿಸ್ತರಣೆಯನ್ನು ಉದ್ಘಾಟಿಸಲಿದ್ದಾರೆ. ಸಂಜೆ ಅವರು ಇನ್ನೂ ಮೂರು ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಡೈನಾಮಿಕ್ ಸಿಟಿ ಕೊಚ್ಚಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ ಕಾಲಡಿ ಗ್ರಾಮದ ಶ್ರೀ ಆದಿಶಂಕರ ಜನ್ಮ ಭೂಮಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಕೊಚ್ಚಿಯಲ್ಲಿ ಮೆಟ್ರೋ ಮತ್ತು ರೈಲು ಸಂಬಂಧಿತ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.
ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಆಗುವ ಭಾರತದ ಪ್ರಯತ್ನಗಳ ಸಾಕಾರ ಸ್ವರೂಪವಾದ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಲಾದ ಮೊದಲ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ನಾಳೆ ಅವರಿಂದ ಕಾರ್ಯಾರಂಭಗೊಳ್ಳಲಿದೆ.
Tomorrow, 2nd September I look forward to being among my sisters and brothers of Mangaluru. Key projects worth Rs. 3,800 crore will be inaugurated or their foundation stones would be laid. These important works are related to mechanisation and industrialisation.
— Narendra Modi (@narendramodi) September 1, 2022
Tomorrow, 2nd September is a landmark day for India’s efforts to become Aatmanirbhar in the defence sector. The first indigenously designed and built aircraft carrier INS Vikrant will be commissioned. The new Naval Ensign (Nishaan) will also be unveiled.
— Narendra Modi (@narendramodi) September 1, 2022
Upon reaching the dynamic city of Kochi, I will address a public meeting. After that I will have the honour of visiting Sri Adi Shankara Janma Bhoomi Kshetram at Kalady village. In the evening, will inaugurate and lay the foundation stone of metro and rail related works in Kochi.
— Narendra Modi (@narendramodi) September 1, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.