ನವದೆಹಲಿ: ಇ ಕಾಮರ್ಸ್ ದೈತ್ಯ ಅಮೆಜಾನ್ ಮತ್ತೊಮ್ಮೆ ತೊಂದರೆಗೆ ಸಿಲುಕಿದೆ. ಕೃಷ್ಣ ಜನ್ಮಾಷ್ಟಮಿಯಂದು ಅಮೆಜಾನ್ ರಾಧಾ-ಕೃಷ್ಣರ ‘ಅಶ್ಲೀಲ’ ಪೇಂಟಿಂಗ್ಗಳನ್ನು ಮಾರಾಟ ಮಾಡಿದ ಆರೋಪವನ್ನು ಎದುರಿಸಿದ್ದು, ಆನ್ಲೈನ್ ನಲ್ಲಿ ‘ಅಮೆಜಾನ್ ಬಹಿಷ್ಕರಿಸಿ’ ಎಂಬ ಹ್ಯಾಶ್ಟ್ಯಾಗ್ ಟ್ರೆಂಡ್ ಮಾಡಲಾರಂಭಿಸಿದೆ.
ಹಿಂದೂ ಜನಜಾಗೃತಿ ಸಮಿತಿ ಈ ಬಗ್ಗೆ ಬೆಂಗಳೂರಿನ ಸುಬ್ರಹ್ಮಣ್ಯ ನಗರದ ಪೊಲೀಸ್ ಇನ್ಸ್ಪೆಕ್ಟರ್ಗೆ ಮನವಿ ಪತ್ರವನ್ನು ಸಲ್ಲಿಸಿದ್ದು, ಅಮೆಜಾನ್ ವಿರುದ್ಧ ಕ್ರಮಕ್ಕೆ ಮನವಿ ಮಾಡಿದೆ.
ಅಮೆಜಾನ್ ಇಂಡಿಯಾ ತನ್ನ ವೆಬ್ಸೈಟ್ನಲ್ಲಿ ರಾಧೆಯೊಂದಿಗೆ ಭಗವಾನ್ ಕೃಷ್ಣನ ಅಶ್ಲೀಲ ಚಿತ್ರಗಳನ್ನು ಮಾರಾಟ ಮಾಡಿದೆ. ಜನ್ಮಾಷ್ಟಮಿ ಮಾರಾಟದ ಅಡಿಯಲ್ಲಿ, ಎಕ್ಸೋಟಿಕ್ ಇಂಡಿಯಾದ ವೆಬ್ಸೈಟ್ನಲ್ಲೂ ಪೇಂಟಿಂಗ್ ಲಭ್ಯವಿತ್ತು.
ಹಿಂದೂಗಳು ಪ್ರತಿಭಟಿಸಿದ ನಂತರ ಅಮೆಜಾನ್ ಮತ್ತು ಎಕ್ಸೋಟಿಕ್ ಇಂಡಿಯಾ ಶ್ರೀಕೃಷ್ಣ ಮತ್ತು ರಾಧೆಯ ಅಶ್ಲೀಲ ವರ್ಣಚಿತ್ರವನ್ನು ತೆಗೆದುಹಾಕಿದೆ.
ಈ ನಡುವೆ, ಇ-ಕಾಮರ್ಸ್ ಸೈಟ್ನಲ್ಲಿ ಮಾರಾಟವಾದ ಚಿತ್ರಗಳು ವೈರಲ್ ಆಗಿದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಮೆಜಾನ್ ಅನ್ನು ಹಿಂದೂಗಳು ಸಂಪೂರ್ಣವಾಗಿ ಬಹಿಷ್ಕರಿಸುವುದೊಂದೇ ಪರಿಹಾರ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇನ್ನು ಕೆಲವರು ಕಾನೂನು ಕ್ರಮ ಜರುಗಿಸಲು ಕೋರಿದ್ದಾರೆ.
Press Release
Members of @HinduJagrutiOrg submitted a memorandum to the Police Inspector, Subramanya Nagar Benguluru, requesting action against @amazonIN for selling obscene painting of Lord Krishna with Radha on their website.#Boycott_Amazon #Boycott_ExoticIndia pic.twitter.com/E5ASG6PLSH
— HJS Karnataka (@HJSKarnataka) August 19, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.