ನವದೆಹಲಿ: ದೇಶ ಕಾಯುವ ಯೋಧರೆಂದರೆ ಪ್ರತಿಯೊಬ್ಬ ನಾಗರಿಕರಿಗೂ ಗೌರವ. ಯೋಧನನ್ನು ಕಂಡ ಕೂಡಲೇ ಸೆಲ್ಯೂಟ್ ಮಾಡಬೇಕು ಎನ್ನುವ ಭಾವ ತನ್ನಷ್ಟಕ್ಕೆ ಉಕ್ಕಿ ಬರುತ್ತದೆ. ಎಳೆಯ ಮಕ್ಕಳೂ ಇದಕ್ಕೆ ಹೊರತಾಗಿಲ್ಲ. ಪುಟಾಣಿ ಬಾಲಕಿಯೊಬ್ಬಳು ಯೋಧನ ಬಳಿ ತೆರಳಿ ಅವರ ಕಾಲು ಮುಟ್ಟಿ ನಮಸ್ಕರಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೂರದಲ್ಲಿ ನಿಂತುಕೊಂಡಿದ್ದ ಯೋಧನನ್ನು ಕಂಡ ಪುಟಾಣಿ ಬಾಲಕಿ ಅವರ ಬಳಿಗೆ ಓಡಿ ಹೋಗಿ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾಳೆ. ಯೋಧ ಕೂಡ ಬಾಲಕಿಯ ಕೆನ್ನೆ ಸವರಿ ಆಕೆಯನ್ನು ಮಾತನಾಡಿಸಲು ಆರಂಭಿಸುತ್ತಾರೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅತ್ಯಂತ ಭಾವನಾತ್ಮಕ ಮತ್ತು ಸುಂದರ ವಿಡಿಯೋ ಇದಾಗಿದೆ.
Raising patriotic young minds is a duty every parent owes to this great nation.
Jai Hind 🇮🇳 pic.twitter.com/mhAjLbtOvG
— P C Mohan (@PCMohanMP) July 15, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.