ನವದೆಹಲಿ: ಭಾರತದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (R&D), ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಪ್ರಯತ್ನವಾಗಿ, ತಂತ್ರಜ್ಞಾನ ಅಭಿವೃದ್ಧಿ ನಿಧಿ (ಟಿಡಿಎಫ್) ಯೋಜನೆಯಡಿಯಲ್ಲಿ ಪ್ರತಿ ಯೋಜನೆಗೆ ನೀಡಲಾಗುತ್ತಿದ್ದ 10 ಕೋಟಿ ರೂಪಾಯ ಹಣವನ್ನು 50 ಕೋಟಿ ರೂಪಾಯಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (ಡಿಆರ್ಡಿಒ) ಕಾರ್ಯಗತಗೊಳಿಸಿದ ಟಿಡಿಎಫ್ ಯೋಜನೆಯು ಎಂಎಸ್ಎಂಇಗಳು ಮತ್ತು ಸ್ಟಾರ್ಟ್-ಅಪ್ಗಳ ಮೂಲಕ ಘಟಕಗಳು, ಉತ್ಪನ್ನಗಳು, ವ್ಯವಸ್ಥೆಗಳು ಮತ್ತು ತಂತ್ರಜ್ಞಾನಗಳ ಸ್ಥಳೀಯ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.
“ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಸಚಿವಾಲಯದ ತಂತ್ರಜ್ಞಾನ ಅಭಿವೃದ್ಧಿ ನಿಧಿ (ಟಿಡಿಎಫ್) ಯೋಜನೆಯಡಿಯಲ್ಲಿ ಪ್ರತಿ ಯೋಜನೆಗೆ 10 ಕೋಟಿ ರೂ.ನಿಂದ 50 ಕೋಟಿ ರೂ.ಗೆ ಹಣವನ್ನು ಹೆಚ್ಚಿಸಲು ಅನುಮೋದಿಸಿದ್ದಾರೆ” ಎಂದು ಇಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಸರ್ಕಾರವು ಈ ಹಿಂದೆ 2022-23ರ ಕೇಂದ್ರ ಬಜೆಟ್ನಲ್ಲಿ ಖಾಸಗಿ ಉದ್ಯಮ, ಸ್ಟಾರ್ಟ್ಅಪ್ಗಳು ಮತ್ತು ಅಕಾಡೆಮಿಗಳಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಬಜೆಟ್ನಲ್ಲಿ 25 ಪ್ರತಿಶತವನ್ನು ಮೀಸಲಿಟ್ಟಿತ್ತು.
ಹಣಕಾಸ ನಿಧಿಯ ಹೆಚ್ಚಳವು ಬಜೆಟ್ ಘೋಷಣೆಗೆ ಅನುಗುಣವಾಗಿದೆ ಮತ್ತು ಇದು ‘ರಕ್ಷಣೆಯಲ್ಲಿ ಆತ್ಮನಿರ್ಭರʼದ ದೃಷ್ಟಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.