ನವದೆಹಲಿ: ಜನರು ಇನ್ನು ಮುಂದೆ ಒಂದು ತಿಂಗಳಲ್ಲಿ 24 ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಬಹುದಾಗಿದೆ. IRCTC ಯೂಸರ್ ಐಡಿಯನ್ನು ಆಧಾರ್ಗೆ ಲಿಂಕ್ ಮಾಡಿದರೆ ಮಾತ್ರ ಈ ಸೌಲಭ್ಯ ಸಿಗಲಿದೆ.
IRCTC ಯೂಸರ್ ಐಡಿಯನ್ನು ಆಧಾರ್ಗೆ ಲಿಂಕ್ ಮಾಡಿದರೆ IRCTC ವೆಬ್ಸೈಟ್ ಮತ್ತು ಅಪ್ಲಿಕೇಶನ್ನಲ್ಲಿ ಒಂದು ತಿಂಗಳಲ್ಲಿ 24 ರೈಲು ಟಿಕೆಟ್ಗಳನ್ನು ಬುಕ್ ಮಾಡಬಹುದು, ಇಲ್ಲದಿದ್ದರೆ 12 ಟಿಕೆಟ್ಗಳನ್ನು ಮಾತ್ರ ಖರೀದಿಸಬಹುದು ಎಂದು ರೈಲ್ವೆ ಸೋಮವಾರ ಪ್ರಕಟಿಸಿದೆ.
ಇಲ್ಲಿಯವರೆಗೆ, ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಶನ್ (IRCTC) ಖಾತೆಯನ್ನು ಆಧಾರ್ಗೆ ಸಂಪರ್ಕಿಸದಿದ್ದಲ್ಲಿ ತಿಂಗಳಿಗೆ ಆರು ಮತ್ತು ಲಿಂಕ್ ಮಾಡಿದ್ದರೆ 12 ಟಿಕೆಟ್ಗಳನ್ನು ಬುಕ್ ಮಾಡಲು ಜನರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಖ್ಯೆಯನ್ನು ಈಗ 24ಕ್ಕೆ ಏರಿಕೆ ಮಾಡಲಾಗಿದೆ.
“ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಭಾರತೀಯ ರೈಲ್ವೇಯು ಆಧಾರ್ ಲಿಂಕ್ ಮಾಡದ ಬಳಕೆದಾರರ ಐಡಿ ಮೂಲಕ ಒಂದು ತಿಂಗಳಲ್ಲಿ ಗರಿಷ್ಠ 6 ಟಿಕೆಟ್ಗಳನ್ನು ಬುಕ್ ಮಾಡುವ ಮಿತಿಯನ್ನು 12 ಟಿಕೆಟ್ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ ಮತ್ತು ಲಿಂಕ್ ಮಾಡಿದರೆ ಒಂದು ತಿಂಗಳಲ್ಲಿ ಗರಿಷ್ಠ 12 ಟಿಕೆಟ್ಗಳನ್ನು ಬುಕ್ ಮಾಡುವ ಮಿತಿಯನ್ನು 24 ಟಿಕೆಟ್ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಆಧಾರ್ ಲಿಂಕ್ ಆಗಿರುವ ಐಡಿ ಮತ್ತು ಬುಕ್ ಮಾಡಬೇಕಾದ ಟಿಕೆಟ್ನಲ್ಲಿರುವ ಒಬ್ಬ ಪ್ರಯಾಣಿಕರನ್ನು ಆಧಾರ್ ಮೂಲಕ ಪರಿಶೀಲಿಸಬಹುದು, ”ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪದೇ ಪದೇ ಪ್ರಯಾಣಿಸುವವರಿಗೆ ಹಾಗೂ ಕುಟುಂಬ ಸದಸ್ಯರಿಗೆ ರೈಲು ಟಿಕೆಟ್ ಕಾಯ್ದಿರಿಸಲು ಇದೇ ಖಾತೆಯನ್ನು ಬಳಸುವವರಿಗೆ ಇದು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.