ಗುವಾಹಟಿ: ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸಮರ್ಥ ವಿರೋಧ ಪಕ್ಷವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ, ರಾಜಧಾನಿ ಗುವಾಹಟಿಯಲ್ಲಿ ನಡೆದ ಮುನ್ಸಿಪಲ್ ಚುನಾವಣೆಯಲ್ಲಿ ಎನ್ಡಿಎ ಅಭೂತಪೂರ್ವವಾಗಿ ಗೆದ್ದಿದೆ.
ಏಪ್ರಿಲ್ 22 ರಂದು ನಡೆದ ಚುನಾವಣೆಯಲ್ಲಿ 60 ವಾರ್ಡ್ಗಳಲ್ಲಿ 58 ವಾರ್ಡ್ಗಳನ್ನು ಎನ್ಡಿಎ ಗೆದ್ದಿದೆ. ನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಕೂಡ ವಿಫಲವಾಗಿದೆ
ಎನ್ಡಿಎ ಗೆದ್ದಿರುವ 58 ಸ್ಥಾನಗಳಲ್ಲಿ ಬಿಜೆಪಿ 52 ಮತ್ತು ಅದರ ಮೈತ್ರಿ ಎಜಿಪಿ ಅಸೋಮ್ ಗಣ ಪರಿಷತ್’ ಉಳಿದ 6 ಸ್ಥಾನಗಳನ್ನು ಗೆದ್ದಿದೆ.
ನಾಗರಿಕ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲ ಬಾರಿಗೆ ಇವಿಎಂಗಳನ್ನು ಬಳಸಲಾಗಿದೆ. 3 ದಿನಗಳ ನಂತರ ಮೇಯರ್ ಮತ್ತು ಉಪಮೇಯರ್ ಆಯ್ಕೆ ನಡೆಯಲಿದೆ ಎಂದು ಬಿಜೆಪಿ ಅಧ್ಯಕ್ಷ ಭಾಬೇಶ್ ಕಲಿತಾ ಘೋಷಿಸಿದ್ದಾರೆ.
ಗುವಾಹಟಿ ಮುನ್ಸಿಪಲ್ ಕಾರ್ಪಿರೇಷನ್ನಲ್ಲಿ ಎಎಪಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದರೆ, ಪಕ್ಷವು ಹೆಚ್ಚಿನ ವಾರ್ಡ್ಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಎಎಪಿ 20 ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಎರಡನೇ ಸ್ಥಾನದಲ್ಲಿದ್ದು, ಕಾಂಗ್ರೆಸ್ ಮತಗಳು ಎಎಪಿಗೆ ವರ್ಗಾವಣೆಯಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
Thank you Guwahati! The people of this lovely city have given a resounding mandate to @BJP4Assam to build on the agenda of development. They have also blessed the hardwork of the state government under CM @himantabiswa. My gratitude to every BJP Karyakarta for the hardwork.
— Narendra Modi (@narendramodi) April 24, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.