ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 25 ರಂದು ರೈಸಿನಾ ಸಂವಾದದ 7 ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಯುರೋಪಿಯನ್ ಒಕ್ಕೂಟದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಸಂವಾದದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ವಿವಿಧ ದೇಶಗಳ ಹಲವಾರು ಮಾಜಿ ಪ್ರಧಾನಿಗಳು ಮತ್ತು ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ಮೂರು ದಿನಗಳ ಕಾರ್ಯಕ್ರಮ ‘‘Terranova, impassioned, impatient, imperilled’ ಎಂಬ ವಿಷಯವನ್ನು ಆಧರಿಸಿದೆ. ರಿಥಿಂಕಿಂಗ್ ಡೆಮಾಕ್ರಸಿ, ಎಂಡ್ ಆಫ್ ಮಲ್ಟಿಲ್ಯಾಟರಲಿಸಂ, ವಾಟರ್ ಕಾಕಸಸ್ ಮತ್ತು ಅಚೀವಿಂಗ್ ಗ್ರೀನ್ ಟ್ರಾನ್ಸಿಶನ್ಸ್ ಸೇರಿದಂತೆ ಸಂವಾದದಲ್ಲಿ ಆರು ವಿಶಾಲ ವಿಷಯಾಧಾರಿತ ಸ್ತಂಭಗಳಿವೆ.
ರೈಸಿನಾ ಡೈಲಾಗ್ 90 ದೇಶಗಳಿಂದ 210 ಕ್ಕೂ ಹೆಚ್ಚು ಸ್ಪೀಕರ್ಗಳೊಂದಿಗೆ ಸುಮಾರು 100 ಸೆಷನ್ಗಳನ್ನು ಹೊಂದಿರುತ್ತದೆ.
ಸಮಾರಂಭದಲ್ಲಿ ಸ್ವೀಡನ್ನ ಮಾಜಿ ಪ್ರಧಾನಿ ಕಾರ್ಲ್ ಬಿಲ್ಡ್ಟ್, ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್, ಮಾಲ್ಡೀವ್ಸ್ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಮತ್ತು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಆಂಥೋನಿ ಅಬಾಟ್ ಉಪಸ್ಥಿತರಿರಲಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ಅವರು ಪೂರ್ವ ಧ್ವನಿಮುದ್ರಿತ ಭಾಷಣ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.