ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು “ನಮೋ ಆ್ಯಪ್ನ ಇನ್ನೋವೇಟಿವ್ ಕ್ಯುರೇಟೆಡ್” ವಿಭಾಗದಲ್ಲಿ ಐದನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಂವಾದದ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.
“ಕ್ರಿಯಾಶೀಲ ಎಕ್ಸಾಂ ವಾರಿಯರ್ಸ್ಗಳೊಂದಿಗೆ ಸಂವಹನ ನಡೆಸುವುದನ್ನು ನಾನು ಆನಂದಿಸುತ್ತೇನೆ. ಪರೀಕ್ಷೆಗಳು ಮತ್ತು ಜೀವನಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರೀಕ್ಷಾ ಪೆ ಚರ್ಚಾ ಒಂದು ಅಭೂತಪೂರ್ವ ವೇದಿಕೆಯಾಗಿದೆ. ಈ ಎಲ್ಲಾ ಸಂವಹನಗಳ ಒಳನೋಟಗಳನ್ನು ನಮೋ ಆ್ಯಪ್ನಲ್ಲಿ ವಿನೂತನವಾಗಿ ಸಂಗ್ರಹಿಸಲಾದ ವಿಭಾಗದಲ್ಲಿ ಕಾಣಬಹುದು” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ನಮೋ ಅಪ್ಲಿಕೇಶನ್ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಪರೀಕ್ಷಾ ಪೇ ಚರ್ಚಾದ ವಿಭಾಗವನ್ನು ಸೇರಿಸಿದೆ, ಇದನ್ನು ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಓದಬಹುದಾಗಿದೆ.
ಆ್ಯಪ್ನಲ್ಲಿ ವಿದ್ಯಾರ್ಥಿಗಳಿಗೆ 15 ವಿಷಯಗಳು ಮತ್ತು ಪೋಷಕರಿಗೆ 7 ವಿಷಯಗಳನ್ನು ವೀಕ್ಷಿಸಲು ಅವಕಾಶವಿದೆ. ಏಪ್ರಿಲ್ 1 ರಂದು ರಾಷ್ಟ್ರ ರಾಜಧಾನಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ‘ಪರೀಕ್ಷಾ ಪೇ ಚರ್ಚಾ’ದ ಐದನೇ ಆವೃತ್ತಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ವಿಶೇಷಚೇತನ ಶಾಲಾ ವಿದ್ಯಾರ್ಥಿಗಳೊಂದಿಗೆ ಕೂಡ ಸಂವಾದ ನಡೆಸಿದ್ದರು.
I enjoy interacting with our dynamic #ExamWarriors.
Pariksha Pe Charcha is a vibrant forum for many issues relating to exams and life.
Insights from all of these interactions can be found in this innovatively curated section on the NaMo App. https://t.co/EegBatrBwJ
— Narendra Modi (@narendramodi) April 16, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.