ಯುಗರತ್ನಾ ಶ್ರೀವಾಸ್ತವ್ ಕೆಲವರಿಗೆ ಈಕೆಯ ಹೆಸರು ಗೊತ್ತಿರ ಬಹುದು ಇನ್ನು ಕೆಲವರಿಗೆ ಗೊತ್ತಿಲ್ಲದಿರಬಹುದು. ಆದರೆ ಈಕೆಯ ಸಾಧನೆ ಅನನ್ಯ ಮತ್ತು ವಿಶಿಷ್ಟ. ತನ್ನ 13 ನೇ ವಯಸ್ಸಿನಲ್ಲಿ ವಿಶ್ವ ಸಂಸ್ಥೆಯಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ ತನ್ನ ವಿಚಾರವನ್ನು ಮಂಡಿಸಿ ಶಬ್ಬಾಸ್ ಪಡೆದವಳು ಈಕೆ. ಅತೀ ಚಿಕ್ಕ ವಯಸ್ಸಿನಲ್ಲಿ ವಿಶ್ವ ಸಂಸ್ಥೆಯಲ್ಲಿ ವಿಚಾರ ಮಂಡಿಸಿದ ಭಾರತದ ಹೆಮ್ಮೆಯ ಕುವರಿ.
ವಿಶ್ವಸಂಸ್ಥೆಯಲ್ಲಿ ವಿಚಾರ ಮಂಡಿಸುವುದೆಂದರೆ ಸಣ್ಣ ಮಾತಲ್ಲ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ನೂರಕ್ಕಿಂತ ಹೆಚ್ಚಿನ ರಾಷ್ಟ್ರದ ಪ್ರತಿನಿಧಿಗಳು ಮತ್ತು ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಇತಂಹ ಸಭೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್ ಅವರು ಯುಗರತ್ನಾ ಶ್ರೀವಾಸ್ತವ ಅವರನ್ನು ಹವಾಮಾನ ವೈಪರಿತ್ಯದ ಬಗ್ಗೆ ಮಾತನಾಡಲು ಆಹ್ವಾನಿಸಿದ್ದರು. ಆಹ್ವಾನವನ್ನು ಸ್ವೀಕರಿಸಿ ವಿಶ್ವಸಂಸ್ಥೆಯಲ್ಲಿ ಯುಗರತ್ನಾ ಹವಾಮಾನ ವೈಪರೀತ್ಯದ ಬಗ್ಗೆ ವಿಚಾರ ಮಂಡಿಸಿ ಎಲ್ಲರ ಪ್ರಶಂಸೆಗೂ ಪಾತ್ರರಾದರು. ಭಾರತದ ಹೆಮ್ಮೆಯನ್ನು ಇಮ್ಮಡಿಗೊಳಿಸಿದರು. ಇದು ನಡೆದದ್ದು 2009 ರಲ್ಲಿ .
ಅದಕ್ಕಿಂತ ಒಂದು ವರ್ಷಕ್ಕೂ ಮುನ್ನ ನಾರ್ವೆಯಲ್ಲಿ ಇದೇ ವಿಚಾರದ ಬಗ್ಗೆ ಆಕೆ ವಿಚಾರ ಮಂಡಿಸಿದ್ದಳು. ಅವಳ ಮಾತಿನ ಚಾತುರ್ಯ, ಶೈಲಿ ಮತ್ತು ವಿಚಾರಗಳಿಗೆ ಪ್ರೇರಿತರಾಗಿ ಅಲ್ಲಿ ಪ್ರಪಂಚದಾದ್ಯಂತದಿಂದ ಭಾಗವಹಿಸಿದ 1200 ಮಕ್ಕಳಲ್ಲಿ ಯುಗರತ್ನಾ ಶ್ರೀವಾಸ್ತವ ಅವರನ್ನು ವಿಶ್ವಸಂಸ್ಥೆಯಲ್ಲಿ ಮಾತನಾಡಲು ಆರಿಸಲಾಯಿತು.
ಹವಾಮಾನ ವೈಪರೀತ್ಯ, ಪರಿಸರದ ಬಗ್ಗೆ ಸದಾ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತಳಾಗಿರುವ ಯುಗರತ್ನಾ ಶ್ರೀವಾಸ್ತವ ಭಾರತದ ತಾರುಮಿತ್ರ ಎಂಬ ಎನ್ಜಿಒದಲ್ಲಿ ಈಗ ಕಾರ್ಯನಿರ್ವಹಿಸುತ್ತಿದ್ದಾಳೆ. ಈ ಎನ್ಜಿಒ ಭಾರತದಾದ್ಯಂತ 16000 ಶಾಲೆಗಳನ್ನು ತನ್ನ ಸದಸ್ಯರನ್ನಾಗಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.