ನವದೆಹಲಿ: ಕೇಂದ್ರ ಸರ್ಕಾರದ ಉಜ್ವಲ ಕಾರ್ಯಕ್ರಮದ ಮೊದಲ ಸ್ವತಂತ್ರ ಮೌಲ್ಯಮಾಪನ ಬಿಡುಗಡೆಯಾಗಿದ್ದು, ಇದರ ಪ್ರಕಾರ ಅಡುಗೆ ಇಂಧನವಾಗಿ ಎಲ್ಪಿಜಿಯ ಹೆಚ್ಚಿನ ಬಳಕೆಯು 2019 ರಲ್ಲಿ ಕನಿಷ್ಠ 1.5 ಲಕ್ಷ ಮಾಲಿನ್ಯ-ಸಂಬಂಧಿತ ಅಕಾಲಿಕ ಮರಣಗಳನ್ನು ತಡೆಗಟ್ಟಿದೆ ಎಂದು ಅಂದಾಜಿಸಲಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) 2019r ವರ್ಷದಲ್ಲಿ ಕನಿಷ್ಠ 1.8 ಮಿಲಿಯನ್ ಟನ್ಗಳಷ್ಟು PM2.5 ಹೊರಸೂಸುವಿಕೆಯನ್ನು ತಪ್ಪಿಸಲು ಸಹಾಯ ಮಾಡಿದೆ ಎಂದು ಈ ಮೌಲ್ಯಮಾಪನವು ತಿಳಿಸಿದೆ.
ವರ್ಲ್ಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ (ಡಬ್ಲ್ಯುಆರ್ಐ) ಭಾರತದಲ್ಲಿ ಕೆಲಸ ಮಾಡುತ್ತಿರುವ ಅಜಯ್ ನಾಗ್ಪುರೆ, ರಿತೇಶ್ ಪಾಟಿದಾರ್ ಮತ್ತು ವಂದನಾ ತ್ಯಾಗಿ ಅವರ ಅಧ್ಯಯನದ ಮೇಲೆ ಈ ವರದಿಯನ್ನು ಪ್ರಕಟಿಸಲಾಗಿದೆ.
ಉಜ್ವಲ ಯೋಜನೆಯ ಪ್ರಯೋಜನಗಳನ್ನು ಇವರು ಮೇಲ್ನೋಟದಲ್ಲಿ ಅಂದಾಜಿಸಿದ್ದು, ಇದರ ಪ್ರಯೋಜನ ಇನ್ನೂ ಹೆಚ್ಚಿರಬಹುದು ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.