ನವದೆಹಲಿ: ಇತ್ತೀಚಿಗೆ ಬಿಡುಗಡೆಯಾದ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ರೇಟಿಂಗ್ಗಳ ಪ್ರಕಾರ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ ಭಾರತದಲ್ಲಿ ನಂಬರ್ 1 ನ್ಯೂಸ್ ನೆಟ್ವರ್ಕ್ ಆಗಿ ಹೊರಹೊಮ್ಮಿದೆ.
ಇದಕ್ಕಾಗಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ವೀಕ್ಷಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ರಿಪಬ್ಲಿಕ್ ಟಿವಿ 44% ರ ಒಟ್ಟಾರೆ ವೀಕ್ಷಕರ ಪಾಲನ್ನು ಹೊಂದಿರುವ ಇಂಗ್ಲಿಷ್ ಸುದ್ದಿಯಾಗಿದೆ. ವೀಕ್ಷಕರ ವಿಷಯದಲ್ಲಿ, ರಿಪಬ್ಲಿಕ್ ಟಿವಿ ಟೈಮ್ಸ್ ನೌಗಿಂತ 200%, ಇಂಡಿಯಾ ಟುಡೆಗಿಂತ 270% ಮತ್ತು CNN News18 ಗಿಂತ 330% ಹೆಚ್ಚು ಎಂದು ಅರ್ನಬ್ ಅವರು ಬಹಿರಂಗಪಡಿಸಿದ್ದಾರೆ.
ರೇಟಿಂಗ್ ವಿಷಯದಲ್ಲಿ ಎನ್ಡಿಟಿವಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ ಎಂದು ಹೇಳಲಾಗಿದೆ.
“ನಮ್ಮ ವೀಕ್ಷಕರಿಗೆ ಧನ್ಯವಾದ ಹೇಳಲು ನಾವು ಮರೆಯಬಾರದು. ಇದು ಗೆಲುವಿಗಿಂತ ಹೆಚ್ಚು. ಇದು ಮತ್ತೊಂದು ಹಂತದ ಸಮರ್ಥನೆಯಾಗಿದೆ. ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ ಭಾರತದ ಜನರ ಪ್ರೀತಿ ಗಳಿಸಿದೆ” ಎಂದು ಅರ್ನಬ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.