ನವದೆಹಲಿ: ಕಳೆದ ವಾರ ಸೌದಿ ಅರೇಬಿಯಾದಲ್ಲಿ ಮೊದಲ ಯೋಗ ಉತ್ಸವ ಆಯೋಜನೆ ಮಾಡಲಾಗಿದೆ. ಸೌದಿ ಯೋಗ ಸಮಿತಿಯು ಆಯೋಜಿಸಿದ ಸೌದಿಯ ಮೊದಲ ಯೋಗ ಉತ್ಸವದಲ್ಲಿ ಭಾಗವಹಿಸಲು ಸೌದಿ ಅರೇಬಿಯಾದಾದ್ಯಂತ 1,000 ಕ್ಕೂ ಹೆಚ್ಚು ಜನರು ಕಳೆದ ಶನಿವಾರ ಕಿಂಗ್ ಅಬ್ದುಲ್ಲಾ ಎಕನಾಮಿಕ್ ಸಿಟಿಯಲ್ಲಿರುವ ಜುಮಾನ್ ಪಾರ್ಕ್ಗೆ ಆಗಮಿಸಿದ್ದರು ಎಂದು ಅರಬ್ ನ್ಯೂಸ್ ವರದಿ ಮಾಡಿದೆ.
10-60 ವಯೋಮಾನದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಇದರಲ್ಲಿ ವಿವಿಧ ಆಟಗಳು, ಯೋಗ ತಂತ್ರಗಳು ಮತ್ತು ಕಲೆಗಳನ್ನೂ ಆಯೋಜನೆ ಮಾಡಲಾಗಿತ್ತು.
ಹುಲ್ಲಿನ ಮೇಲೆ ಯೋಗ ಮಾಡುವುದರೊಂದಿಗೆ ಉತ್ಸವ ಪ್ರಾರಂಭವಾಯಿತು ಮತ್ತು ಪಾಲ್ಗೊಳ್ಳುವವರಿಗೆ ಯೋಗವನ್ನು ಅಭ್ಯಾಸ ಮಾಡಲು, ವಿವಿಧ ಪ್ರದರ್ಶನಗಳನ್ನು ನೋಡಲು, ಯೋಗ ಸ್ಟುಡಿಯೋ ಡೆಮೊಗಳನ್ನು ವೀಕ್ಷಿಸಲು ಅವಕಾಶವಿತ್ತು. ಒಂದು ದಿನದ ಕಾರ್ಯಕ್ರಮದಲ್ಲಿ ಸೌದಿ ಮತ್ತು ಅಂತರಾಷ್ಟ್ರೀಯ ಯೋಗ ತಜ್ಞರಿಂದ ಸುಮಾರು ಎಂಟು ಗಂಟೆಗಳ ಕಾಲ ಬೋಧನೆ ಮತ್ತು ಉಪನ್ಯಾಸಗಳು ನಡೆದಿದೆ.
ಸೌದಿ ಯೋಗ ಸಮಿತಿಯ ಮುಖ್ಯಸ್ಥ ನೌಫ್ ಮಾರ್ವಾಯ್ ಸಂದರ್ಶಕರ ಸಂಖ್ಯೆ ಮತ್ತು ಉತ್ಸಾಹಭರಿತ, ಸಕಾರಾತ್ಮಕ ಪ್ರತಿಕ್ರಿಯೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.
ಟ್ವಿಟ್ ಮಾಡಿರುವ ಅವರು, “ಸೌದಿ ಅರೇಬಿಯಾದ ಮೊದಲ ಯೋಗ ಉತ್ಸವವು ಸಾವಧಾನತೆ ಮತ್ತು ಧ್ಯಾನವನ್ನು ನೀಡಿದೆ. ದೇಶದ ಮೊದಲ ಯೋಗದಲ್ಲಿ ಪಾಲ್ಗೊಳ್ಳಲು ಸೌದಿ ಅರೇಬಿಯಾದ 1,000 ಕ್ಕೂ ಹೆಚ್ಚು ಜನರು ಶನಿವಾರ ಕಿಂಗ್ ಅಬ್ದುಲ್ಲಾ ಎಕನಾಮಿಕ್ ಸಿಟಿಯಲ್ಲಿರುವ ಜುಮಾನ್ ಪಾರ್ಕ್ಗೆ ಆಗಮಿಸಿದರು” ಎಂದಿದ್ದಾರೆ.
Arab News: Saudi Arabia’s first yoga festival offers mindfulness and meditation. JEDDAH: More than 1,000 people from across Saudi Arabia flocked to Juman Park in King Abdullah Economic City on Saturday to take part in the country's first yoga festival. https://t.co/sGMAE4a1fV 🤸🏻♂️ pic.twitter.com/cxYPfONQch
— Nouf Almarwaai نوف المروعي 🇸🇦 (@NoufMarwaai) January 30, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.