ಎಪ್ರಿಲ್ 7 ವಿಶ್ವ ಆರೋಗ್ಯ ದಿನ : ಇವತ್ತು ವಿಶ್ವ ಆರೋಗ್ಯ ದಿನಾಚರಣೆ. ಈ ಬಾರಿಯ ವಿಶ್ವ ಆರೋಗ್ಯ ದಿನಾಚರಣೆಯ ಉದ್ಘೋಷಣೆ ” ಆಹಾರ ಸುರಕ್ಷೆ”. ನಮ್ಮ ಸುತ್ತಮುತ್ತಲಿನ ಪರಿಸರ ಹಾಳಾಗಿ ಹೋಗಿರುವುದರಿಂದ ಮತ್ತು ವಿಪರೀತ ಎನಿಸುವಷ್ಟು ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ ಜನರ ಆರೋಗ್ಯ ಮಟ್ಟವೂ ಕುಸಿಯುತ್ತಿರುವುದನ್ನು ಕೂಡ ನಾವು ಕಾಣಬಹುದಾಗಿದೆ. ಆದ್ದರಿಂದ ಜನರ ಆಹಾರದ ಗುಣಮಟ್ಟ ಚೆನ್ನಾಗಿದ್ದರೆ ಆರೋಗ್ಯ ಸುಧಾರಿಸುತ್ತದೆ ಎನ್ನುವ ವಿಷಯವನ್ನು ಜನರಿಗೆ ಮುಟ್ಟಿಸಲು ತೋಟದಿಂದ ನೇರವಾಗಿ ತಟ್ಟೆಗೆ ಎನ್ನುವ ಸ್ಲೋಗನ್ ಕೂಡ ಈ ಬಾರಿಯ ವಿಶ್ವ ಆರೋಗ್ಯ ದಿನದಂದು ಜನರಿಗೆ ತಿಳಿಸುವ ಚಿಂತನೆ ನಡೆಯುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ 1948ರಲ್ಲಿ ಹುಟ್ಟಿದ ಬಳಿಕ ಅದರ ವರ್ಷಾಚರಣೆಯ ನೆನಪಿಗಾಗಿ ಪ್ರತಿ ವರ್ಷ 7 ಎಪ್ರಿಲ್ ರಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿಯ ಥೀಮ್ ಆಹಾರ ಸುರಕ್ಷೆ ಆಗಿರಬಹುದು. ಆದರೆ ಪ್ರಶ್ನೆ ಇರುವುದು ಮನುಷ್ಯನ ಆರೋಗ್ಯಕ್ಕೆ ಆತ ಬದುಕುವ ಪರಿಸರ ಕೂಡ ಬಹಳ ಮುಖ್ಯವಾಗಿರುತ್ತದೆ.
ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲರೂ ತಮ್ಮ ತಮ್ಮ ಕೆಲಸದ ಕ್ಷೇತ್ರಗಳಲ್ಲಿ ಬಿಸಿಯಾಗಿರುತ್ತಾರೆ. ಈಗಿನ ಕೆಲಸದ ಒತ್ತಡ ಎಲಿಯ ತನಕ ಎಂದರೆ ಮನೆಗೆ ಬಂದು ಊಟ ತಯಾರು ಮಾಡಲೂ ಪುರುಸೋತ್ತಿಲ್ಲ. ಕೆಲಸ ಮುಗಿಸಿ ಬರುವಾಗ ಊಟ ಅಥವಾ ತಿಂಡಿಯ ಪೂಟ್ಟಣ ತಂದು ತಿನ್ನುವ ಸ್ಥಿತಿ . ಇಲ್ಲದಿದ್ದರೆ ರೆಡಿ ಟು ಈಟ್. ಅದೂ ಕಷ್ಟ ಅನ್ನೋರಿಗೆ ಇದ್ದೆ ಇದೆಯಲ್ಲ ಜಂಗ್ ಪುಡ್. ಅಲ್ಲಿಗೆ ಆ ವ್ಯಕ್ತಿಯ ಅರ್ಧ ಆಯಸ್ಸು ಗೋತಾ. ಅಲ್ಲಿಂದ ಪ್ರಾರಂಭವಾಗುವುದೇ ಖಿನ್ನತೆ, ಮಾನಸಿಕ ಮತ್ತು ಹೃದಯ ಸಂಬಂಧಿ ಕಾಯಿಲೆ.
ಮಾನಸಿಕ ಮತ್ತು ದೈಹಿಕ ಆರೋಗ್ಯ ಪ್ರತಿಯೊಬ್ಬನಿಗೂ ಅಗತ್ಯವಾಗಿರುತ್ತದೆ. ಆಧುನಿಕ ಜೀವನದಲ್ಲಿ ದೇಹದ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಕುಂಠಿತಗೊಳ್ಳುತ್ತಿದೆ. ಈ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯೂ ಹೆಚ್ಚು ಕಾಳಜಿ ವಹಿಸಬೇಕಾದ ಅಗತ್ಯವಿದೆ. ಯೋಗ ಮತ್ತು ಪ್ರಾಣಾಯಾಮ, ನಿರಂತರ ವ್ಯಾಯಾಮಗಳು ದೇಹ ಮತ್ತು ಮನಸ್ಸಿನ ನಿರಂತರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಎ.೨೪ನ್ನು ಭಾರತ ಸರಕಾರದ ಮನವಿಯ ಮೇರೆಗೆ ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿರುವುದು ಮಹತ್ವ ಹೆಜ್ಜೆಯಾಗಿದೆ.
ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನ ಮತ್ತು ಹಳ್ಳಿಯ ಮನೆಮನೆಗೆ ಒಂದು ಶೌಚಾಲಯ ಯೋಜನೆ ಕೂಡ ಪರೋಕ್ಷವಾಗಿ ಆರೋಗ್ಯ ವೃದ್ಧಿಗೆ ಪೂರಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.