ಬೆಂಗಳೂರು : ಕೋವಿಡ್ ಹಿನ್ನೆಲೆಯಲ್ಲಿ ಜನರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ನೋಂದಣಿಗೆ ಕಂದಾಯ ಇಲಾಖೆ ವಿಶೇಷ ರಿಯಾಯತಿ ಪ್ರಕಟಿಸಿದೆ.
ಇಂದು ಮಾಧ್ಯಮದೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, “ಹೊಸ ವರ್ಷದ ಮೊದಲ ದಿನವೇ ಸರ್ಕಾರ ಈ ರಿಯಾಯಿತಿಯನ್ನು ಜನರ ಅನುಕೂಲಕ್ಕಾಗಿ ನೀಡುತ್ತಿದೆ. ಇಂದಿನಿಂದಲೇ ಈ ಸೌಲಭ್ಯವನ್ನು ಜನರು ಪಡೆದುಕೊಳ್ಳಬಹುದು. ಇದರಿಂದ ಸರ್ಕಾರಕ್ಕೆ ಆರ್ಥಿಕವಾಗಿ ಸ್ವಲ್ಪ ಆದಾಯ ಕಡಿಮೆ ಆಗಬಹುದು. ಆದರೆ ಲಕ್ಷಾಂತರ ಜನರಿಗೆ ಇದು ಅನುಕೂಲವಾಗುತ್ತದೆ. ಎಷ್ಟೋ ರೈತರು ಅಗ್ರಿಮೆಂಟ್, ಜಿಪಿಎ ಮಾಡಿಕೊಂಡಿದ್ದರು. ಅವರೆಲ್ಲ ಈಗ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು.
ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನಗಳು, ಕಟ್ಟಡಗಳು, ಅಪಾರ್ಟ್ಮೆಂಟ್ ಹಾಗೂ ಇತರ ಎಲ್ಲ ರೀತಿಯ ಸ್ಥಿರಾಸ್ತಿಗಳ ನೋಂದಣಿಗೆ ಮಾರ್ಗಸೂಚಿ ದರವನ್ನು 10% ರಷ್ಟು ಕಡಿತಗೊಳಿಸಲಾಗಿದೆ.
ಈ ರಿಯಾಯಿತಿ ದಿನಾಂಕ 01-01-2022 ರಿಂದ 31-03-2022 ವರೆಗೆ ಮಾತ್ರ ಲಭ್ಯ ಇರುತ್ತದೆ” ಎಂದು ಹೇಳಿದರು.
ಕಂದಾಯ ಇಲಾಖೆ ರಾಜ್ಯದಾದ್ಯಂತ ಎಲ್ಲ ಸ್ವತ್ತುಗಳ ಮಾರಾಟ ಮತ್ತು ಖರೀದಿ ಮಾಡುವವರಿಗೆ ಮಾರ್ಗಸೂಚಿ ಬೆಲೆಯಲ್ಲಿ 10% ರಿಯಾಯಿತಿ ಘೋಷಣೆ ಮಾಡಿದೆ. ಈ ರಿಯಾಯಿತಿ ದಿನಾಂಕ 01-01-2022 ರಿಂದ 31-03-2022 ವರೆಗೆ ಮಾತ್ರ ಲಭ್ಯ ಇರುತ್ತದೆ.#RAshoka #RevenueMinister pic.twitter.com/YuhQPbRA1i
— R. Ashoka (ಆರ್. ಅಶೋಕ) (@RAshokaBJP) January 1, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.