
ನವದೆಹಲಿ: ಭಾರತವು ರಷ್ಯಾದಿಂದ ಕ್ಷಿಪಣಿ ನಿರೋಧಕ ವ್ಯವಸ್ಥೆ ಎಸ್-400 ಅನ್ನು ಖರೀದಿ ಮಾಡುತ್ತಿದೆ. ಅಮೆರಿಕದ ನಿರ್ಬಂಧಕ್ಕೂ ಜಗ್ಗದೆ ಭಾರತ ಈ ಮಿಸೈಲ್ ಸಿಸ್ಟಮ್ ಅನ್ನು ಖರೀದಿ ಮಾಡುತ್ತಿರುವುದು ವಿಶೇಷ.
ಎಸ್-400 ಅನ್ನು ಖರೀದಿ ಮಾಡುತ್ತಿರುವ ತನ್ನ ನಿರ್ಧಾರವನ್ನು ಭಾರತ ಬಲವಾಗಿ ಸಮರ್ಥನೆ ಮಾಡಿಕೊಂಡಿದೆದ್ದು, ಈ ಖರೀದಿಯು ಬೆದರಿಕೆಗಳ ಆಧಾರದ ಮೇಲಿನ ʼಸೌರ್ವಭೌಮ ನಿರ್ಧಾರʼ ಎಂದು ಹೇಳಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, ಭದ್ರತಾ ಸವಾಲುಗಳನ್ನು ಎದುರಿಸಲು ಸಶಸ್ತ್ರ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ಬೆದರಿಕೆಯ ಗ್ರಹಿಕೆ, ಕಾರ್ಯಾಚರಣೆ ಮತ್ತು ತಾಂತ್ರಿಕ ಅಂಶಗಳ ಆಧಾರದ ಮೇಲೆ ಸರ್ಕಾರವು ಸಾರ್ವಭೌಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ರಷ್ಯಾದಿಂದ ಎಸ್ -400 ವ್ಯವಸ್ಥೆಯನ್ನು ತಲುಪಿಸಲು 2018 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅವರು ಹೇಳಿದರು.
ರಕ್ಷಣಾ ಉಪಕರಣಗಳ ಖರೀದಿಯ ಮೇಲೆ ಪರಿಣಾಮ ಬೀರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವಿದೆ ಎಂದಿರುವ ಅವರು, ಭಾರತವು ಈಗಾಗಲೇ ಸ್ಥಳೀಯ ಆ್ಯಂಟಿ-ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ವೈರಿ ಡ್ರೋನ್ಗಳನ್ನು ಪತ್ತೆ ಹಚ್ಚಲು, ಅವುಗಳ ವಿರುದ್ಧ ದಾಳಿ ಮಾಡಲು ಈ ಡ್ರೋನ್ ವ್ಯವಸ್ಥೆ ಸಮರ್ಥವಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


