
ನವದೆಹಲಿ: ಇಂದು 12ನೇ ಭಾರತೀಯ ಅಂಗಾಂಗ ದಾನ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ದೇಶದಲ್ಲಿ ಅಂಗಾಂಗ ದಾನಕ್ಕಾಗಿ ಸಮಗ್ರ ಸಾರ್ವಜನಿಕ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ NOTTO ಆಯೋಜಿಸಿದ್ದ 12 ನೇ ಭಾರತೀಯ ಅಂಗಾಂಗ ದಾನ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಅಂಗಾಂಗ ದಾನ ಮಾಡುವುದರಿಂದ ಅಂಗಾಂಗದ ಅವಶ್ಯಕತೆ ಮತ್ತು ಅಂಗ ದಾನದ ನಡುವಿನ ಅಂತರವನ್ನು ಕಡಿಮೆ ಮಾಡಬಹುದು ಎಂದು ಸಚಿವರು ಅಭಿಪ್ರಾಯಿಸಿದ್ದಾರೆ.
ಸಾರ್ವಜನಿಕ ಸಹಭಾಗಿತ್ವ ಮತ್ತು ದಾನದ ಬಗೆಗಿನ ಭಾರತೀಯ ತತ್ವ ಅಂಗಾಂಗ ದಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಮುಖವಾಗಿದೆ ಎಂದು ಅವರು ಹೇಳಿದರು.
ಕೇಂದ್ರದ ರಾಜ್ಯ ಖಾತೆ ಆರೋಗ್ಯ ಸಚಿವೆ ಡಾ.ಭಾರತಿ ಪವಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದ ನಿರಂತರ ಪ್ರಯತ್ನದಿಂದ ದೇಶದಲ್ಲಿ ಅಂಗಾಂಗ ದಾನ 2013ರಲ್ಲಿ ಐದು ಸಾವಿರದಿಂದ ಇಲ್ಲಿಯವರೆಗೆ ಹನ್ನೆರಡು ಸಾವಿರಕ್ಕೆ ಏರಿಕೆಯಾಗಿದ್ದು ಶ್ಲಾಘನೀಯ ಎಂದರು.
ಪ್ರಧಾನಮಂತ್ರಿಯವರು ಯಾವಾಗಲೂ ಅಂಗಾಂಗ ದಾನಕ್ಕಾಗಿ ಸಾರ್ವಜನಿಕರನ್ನು ಪ್ರೋತ್ಸಾಹಿಸುತ್ತಿದ್ದಾರೆ ಏಕೆಂದರೆ ಅವರು ಅದನ್ನು ದಾನದ ಒಂದು ಶ್ರೇಷ್ಠ ರೂಪವೆಂದು ಪರಿಗಣಿಸುತ್ತಾರೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಇಬ್ಬರೂ ಸಚಿವರು ಮೃತ ದಾನಿಗಳ ಕುಟುಂಬಗಳನ್ನು ಮತ್ತು ಅಂಗಾಂಗ ಕಸಿ ವೃತ್ತಿಪರರನ್ನು ಸನ್ಮಾನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


