ನವದೆಹಲಿ : ಸರಕು ಸಾಗಣೆ ಮತ್ತು ಪ್ರಯಾಣಿಕರ ವಿಭಾಗಗಳ ನಂತರ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಮೀಸಲಾದ ಮೂರನೇ ವಿಭಾಗವನ್ನು ಪ್ರಾರಂಭಿಸಲು ರೈಲ್ವೆ ಸಜ್ಜಾಗಿದೆ. ಇದರಡಿ ಸುಮಾರು 190 ಥೀಮ್ ಆಧಾರಿತ ರೈಲುಗಳನ್ನು ಸಂಚರಿಸಲು ನಿರ್ಧರಿಸಲಾಗಿದೆ. ಈ ರೈಲುಗಳಿಗೆ ಭಾರತ್ ಗೌರವ್ ರೈಲು ಎಂದು ಹೆಸರಿಸಲಾಗುತ್ತದೆ.
ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈಲ್ವೇ ಸಚಿವರು, ಈ ರೈಲುಗಳನ್ನು ಖಾಸಗಿ ವಲಯ ಮತ್ತು IRCTC ಎರಡೂ ಕೂಡ ನಡೆಸಬಹುದು ಎಂದು ಹೇಳಿದ್ದಾರೆ.
‘ಇವು ಸಾಮಾನ್ಯ ರೈಲುಗಳಲ್ಲ, ಇವು ವೇಳಾಪಟ್ಟಿಯಲ್ಲಿ ಚಲಿಸುತ್ತವೆ. ಈ ಥೀಮ್ ಆಧಾರಿತ ರೈಲುಗಳಿಗಾಗಿ ನಾವು 3,033 ಕೋಚ್ಗಳು ಅಥವಾ 190 ರೈಲುಗಳನ್ನು ಗುರುತಿಸಿದ್ದೇವೆ. ಪ್ರಯಾಣಿಕ ಮತ್ತು ಸರಕುಗಳ ವಿಭಾಗಗಳ ನಂತರ, ಭಾರತ್ ಗೌರವ್ ರೈಲುಗಳನ್ನು ಓಡಿಸುವ ಮೂಲಕ ನಾವು ಪ್ರವಾಸೋದ್ಯಮ ವಿಭಾಗವನ್ನು ಪ್ರಾರಂಭಿಸುತ್ತೇವೆ. ಈ ರೈಲುಗಳು ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಲಿವೆ. ಅದಕ್ಕಾಗಿ ಇಂದಿನಿಂದಲೇ ಅರ್ಜಿ ಆಹ್ವಾನಿಸಿದ್ದೇವೆ’ ಎಂದಿದ್ದಾರೆ.
ದೇಶದ ಜನರು ಭಾರತದ ಪರಂಪರೆಯನ್ನು ಅರ್ಥಮಾಡಿಕೊಳ್ಳಲು, ಪ್ರಶಂಸಿಸಲು ಮತ್ತು ಮುಂದಕ್ಕೆ ಕೊಂಡೊಯ್ಯಲು ಥೀಮ್ ಆಧಾರಿತ ರೈಲುಗಳನ್ನು ಸೂಚಿಸಿದ ಪ್ರಧಾನಿ ನರೇಂದ್ರ ಮೋದಿಯವರಿಂದ ಈ ಕಲ್ಪನೆ ಹುಟ್ಟಿಕೊಂಡಿದೆ ಎಂದು ಸಚಿವರು ಹೇಳಿದ್ದಾರೆ.
ಈ ರೈಲುಗಳ ದರವನ್ನು ಪ್ರಾಯೋಗಿಕವಾಗಿ ಟೂರ್ ಆಪರೇಟರ್ಗಳು ನಿರ್ಧರಿಸುತ್ತಾರೆ ಆದರೆ ಬೆಲೆಗಳಲ್ಲಿ ಯಾವುದೇ ಅಸಹಜತೆ ಇಲ್ಲ ಎಂದು ರೈಲ್ವೆ ಖಚಿತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಒಡಿಶಾ, ರಾಜಸ್ಥಾನ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಈ ರೈಲುಗಳ ಬಗ್ಗೆ ಆಸಕ್ತಿ ತೋರಿಸಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.