ನವದೆಹಲಿ: ಭಾರತದ ತೈಲ ಕಂಪನಿಗಳು 22 ಸಾವಿರ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜಿಂಗ್ ಸ್ಟೇಷನ್ಗಳನ್ನು ಮಿಷನ್ ಮೋಡ್ನಲ್ಲಿ ಪ್ರಮುಖ ನಗರಗಳಲ್ಲಿ ಮತ್ತು ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಥಾಪಿಸಲು ಮುಂದಾಗಿವೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹತ್ತು ಸಾವಿರ ನಿಲ್ದಾಣಗಳನ್ನು ಸ್ಥಾಪಿಸಲಿದೆ. ಇದು ಈಗಾಗಲೇ 439 ಇವಿ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಿದೆ ಮತ್ತು ಮುಂದಿನ ಒಂದು ವರ್ಷದಲ್ಲಿ ತನ್ನ ರಿಟೇಲ್ ಔಟ್ಲೆಟ್ ನೆಟ್ವರ್ಕ್ನಲ್ಲಿ 2000 ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲು ಯೋಜಿಸಿದೆ ಎಂದಿದ್ದಾರೆ.
ಮುಂದಿನ ಒಂದು ವರ್ಷದೊಳಗೆ ಭಾರತ್ ಪೆಟ್ರೋಲಿಯಂ ವತಿಯಿಂದ 1000 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ಒಟ್ಟಾರೆಯಾಗಿ 7000 ಸ್ಥಾಪನೆಯಾಗಲಿವೆ. ಈಗಾಗಲೇ 52 ನಿಲ್ದಾಣಗಳನ್ನು ಸ್ಥಾಪಿಸಿದೆ.
ಈಗಾಗಲೇ 382 ಇವಿ ಕೇಂದ್ರಗಳನ್ನು ಸ್ಥಾಪಿಸಿರುವ ಎಚ್ಪಿಸಿಎಲ್ ಮುಂದಿನ ಒಂದು ವರ್ಷದಲ್ಲಿ 1000 ಮತ್ತು ಒಟ್ಟಾರೆಯಾಗಿ 5000 ಕೇಂದ್ರಗಳನ್ನು ಸ್ಥಾಪಿಸಲಿದೆ ಎಂದಿದ್ದಾರೆ.
2030 ರ ವೇಳೆಗೆ ಆರ್ಥಿಕತೆಯಿಂದ ಇಂಗಾಲದ ತೀವ್ರತೆಯನ್ನು ಶೇಕಡಾ 45 ರಷ್ಟು ಕಡಿಮೆ ಮಾಡುವುದಾಗಿ ಗ್ಲಾಸ್ಗೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗೆ ಅನುಗುಣವಾಗಿ ಈ ಕ್ರಮಗಳು ಬರುತ್ತಿವೆ.
In line with PM @narendramodi Ji’s Panchamrit announced in Glasgow to reduce carbon intensity of the economy by 45% by 2030, oil companies of India will set up 22,000 EV charging stations on a mission mode in prominent cities & national highways across the country.
— Hardeep Singh Puri (@HardeepSPuri) November 9, 2021
Of these, @IndianOilcl will set up 10,000 stations. It has already installed 439 EV charging stations & plans to install 2000 charging stations in its retail outlet network over the next one year.
— Hardeep Singh Puri (@HardeepSPuri) November 9, 2021
Another 1000 EV Charging Stations will be set up by @BPCLimited within the next one year & 7000 overall. It has already set up 52 stations. @HPCL which has already installed 382 EV stations so far will set up 1000 stations in the next one year & 5000 overall.
— Hardeep Singh Puri (@HardeepSPuri) November 9, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.