ನವದೆಹಲಿ: ಕೋವಿಡ್ ಯುಗದಲ್ಲಿನ ಭಾರತ-ಆಸಿಯಾನ್ ಸ್ನೇಹವು ಭವಿಷ್ಯದಲ್ಲಿನ ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು ಜನರ ನಡುವೆ ಸೌಹಾರ್ದತೆಯ ನೆಲೆಯನ್ನು ರೂಪಿಸುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಭರವಸೆ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 18 ನೇ ಆಸಿಯಾನ್-ಭಾರತ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೋವಿಡ್-19 ಕಾರಣದಿಂದಾಗಿ ಎಲ್ಲರೂ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಈ ಸವಾಲಿನ ಸಮಯವು ಭಾರತ-ಆಸಿಯಾನ್ ಸ್ನೇಹದ ಪರೀಕ್ಷೆಯಾಗಿದೆ ಎಂದು ಅವರು ಹೇಳಿದರು.
ಭಾರತ ಮತ್ತು ಆಸಿಯಾನ್ ಸಾವಿರಾರು ವರ್ಷಗಳಿಂದ ಅನನ್ಯ ಸಂಬಂಧವನ್ನು ಹೊಂದಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಆಸಿಯಾನ್ನ ಏಕತೆ ಮತ್ತು ಕೇಂದ್ರೀಯತೆಯು ಭಾರತಕ್ಕೆ ಯಾವಾಗಲೂ ಪ್ರಮುಖ ಆದ್ಯತೆಯಾಗಿದೆ ಎಂದು ಮೋದಿ ಹೇಳಿದರು.
2022 ರಲ್ಲಿ ಭಾರತ-ಆಸಿಯಾನ್ ಪಾಲುದಾರಿಕೆಯು 30 ವರ್ಷಗಳನ್ನು ಪೂರ್ಣಗೊಳಿಸುತ್ತದೆ ಮತ್ತು ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸುತ್ತದೆ ಎಂದು ಮೋದಿ ಒತ್ತಿ ಹೇಳಿದರು.
वर्ष 2022 में हमारी पार्टनरशिप के 30 वर्ष पूरे होंगे।
भारत भी अपनी आज़ादी के 75 वर्ष पूरे करेगा।
मुझे बहुत हर्ष है कि इस महत्वपूर्ण पड़ाव को हम 'आसियान-भारत मित्रता वर्ष' के रूप में मनाएंगे।
– पीएम @narendramodi pic.twitter.com/PbVyFGe0Xq
— BJP (@BJP4India) October 28, 2021
ಭಾರತವು ಈ ಮಹತ್ವದ ಮೈಲಿಗಲ್ಲನ್ನು ಆಸಿಯಾನ್-ಭಾರತ ಸ್ನೇಹ ವರ್ಷವಾಗಿ ಆಚರಿಸಲಿದೆ ಎಂದು ಅವರು ಘೋಷಿಸಿದರು.
ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆ ಸೇರಿದಂತೆ ಪ್ರಮುಖ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳನ್ನು ಶೃಂಗಸಭೆಯಲ್ಲಿ ಚರ್ಚಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.