ನವದೆಹಲಿ: ಅದ್ಭುತ ಪ್ರದರ್ಶನದ ಮೂಲಕ ವಿಶ್ವದ ಗಣ್ಯರ ಗಮನ ಸೆಳೆದಿರುವ ಆರ್. ಪ್ರಗ್ನಾನಂದ ಅವರು ಅಮೆರಿಕದ ಕ್ರಿಸ್ಟೋಫರ್ ಯೂ ಅವರನ್ನು 3-0 ಅಂತರದಿಂದ ಸೋಲಿಸಿ ಭಾನುವಾರ 40,000 ಡಾಲರ್ ಮೊತ್ತದ ಜೂಲಿಯಸ್ ಬೇರ್ ಚಾಲೆಂಜರ್ಸ್ ಚೆಸ್ ಟೂರ್ ಅನ್ನು ಗೆದ್ದುಕೊಂಡಿದ್ದಾರೆ.
ಪ್ರಗ್ನಾನಂದ ಒಂಬತ್ತು ಆಟಗಳಲ್ಲಿ 8.5 ಅಂಕಗಳನ್ನು ಗಳಿಸಿದ್ದಾರೆ.
ಪ್ರಗ್ನಾನಂದ ಈ ಪಂದ್ಯವನ್ನು ಗೆದ್ದುಕೊಂಡಿರುವುದು ಮಾತ್ರವಲ್ಲದೆ 2022 ರಲ್ಲಿ ಮಿಲಿಯನ್ ಡಾಲರ್ ಮೊತ್ತದ ಮೆಲ್ಟ್ವಾಟರ್ ಚಾಂಪಿಯನ್ಸ್ ಟೂರ್ನಲ್ಲಿ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
Indian GM and the youngest IM in history, @rpragchess, 16, wins the Julius Baer Challengers Chess Tour Finals defeating 🇺🇸's Christopher Yoo 3-0
With the win he has secured a regular spot at next year's @ChampChessTour
Many congratulations Champ!!#KheloIndia#chess pic.twitter.com/Z36qg7aSuQ
— Khelo India (@kheloindia) October 18, 2021
ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಟ್ವಿಟ್ಟರ್ ನಲ್ಲಿ ಪ್ರಜ್ನಾನಂದನನ್ನು ಅಭಿನಂದಿಸಿದವರಲ್ಲಿ ಮೊದಲಿಗರಾಗಿದ್ದರೆ, ಮಾಜಿ ವಿಶ್ವ ಚಾಂಪಿಯನ್ ವ್ಲಾಡಿಮಿರ್ ಕ್ರಾಮ್ನಿಕ್ ಮತ್ತು ಚೆಸ್ ಇತಿಹಾಸದ ಪ್ರಬಲ ಮಹಿಳಾ ಆಟಗಾರ್ತಿ ಜುಡಿಟ್ ಪೋಲ್ಗರ್ ಕೂಡ ಚೆನ್ನೈ ಮೂಲದ 15 ವರ್ಷದ ಹುಡುಗನನ್ನು ಹಾಡಿ ಹೊಗಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.