ನವದೆಹಲಿ: ಲಡಾಖ್ನ ಸಂಪರ್ಕವನ್ನು ವೃದ್ಧಿಸುವ ನಿಟ್ಟಿನಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಶುಕ್ರವಾರ ಐದು ಪ್ರಮುಖ ರಸ್ತೆ ಯೋಜನೆಗಳ ನಿರ್ಮಾಣಕ್ಕೆ ಚಾಲನೆ ನೀಡಿದೆ.
ರಸ್ತೆ ಯೋಜನೆಗಳ ನಿರ್ಮಾಣಕ್ಕೆ ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ರಾಧಾ ಕೃಷ್ಣ ಮಾಥುರ್ ಅವರು ತುರ್ತುಕ್ನಿಂದ ಚಾಲನೆ ನೀಡಿದರು.
ಲೇಹ್ನ ಮುಖ್ಯ ಕಾರ್ಯನಿರ್ವಾಹಕ ಕೌನ್ಸಿಲರ್ ತಶಿ ಗ್ಯಾಲ್ಸನ್, ಲಡಾಖ್ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮಗ್ಯಾಲ್, ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ಬಿಆರ್ಒ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಕೂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಲಡಾಖ್ ಆಡಳಿತ ಮತ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನಡುವೆ ಸೆಪ್ಟೆಂಬರ್ 3, 2021 ರಂದು ಈ ಬಗ್ಗೆ ಒಪ್ಪಂದಕ್ಕೆ ಸಹಿ ಬಿದ್ದಿದ್ದು, ಇದರಡಿ ಗುಡ್ಡಗಾಡು ಪ್ರದೇಶದಲ್ಲಿ ಸಂಪರ್ಕ ಅಭಿವೃದ್ಧಿಗಾಗಿ ರಸ್ತೆಗಳು ಮತ್ತು ಸುರಂಗಗಳ ನಿರ್ಮಾಣ/ಸುಧಾರಣೆಗಳನ್ನು ಒಳಗೊಂಡ ಯೋಜನೆಗಳನ್ನು ಬಿಆರ್ಒಗೆ ವಹಿಸಲಾಗಿದೆ.
ಐದು ಯೋಜನೆಗಳ ಪೈಕಿ ಗ್ರೀನ್ಫೀಲ್ಡ್ ಅಲೈನ್ಮೆಂಟ್ ಮತ್ತು ನಾಲ್ಕು ಪ್ರಮುಖ ಏಕ ಪಥದ ರಸ್ತೆಗಳ ಉನ್ನತೀಕರಣವೂ ಸೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.