ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40ವಾರಗಳ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಎಂಬ ಕಾರ್ಯಕ್ರಮದ 10ನೇ ವಾರದ ಸ್ವಚ್ಛತಾ ಅಭಿಯಾನವನ್ನು ಮಾ.5 ರಂದು ಕದ್ರಿಹಿಲ್ಸ್ ಸರ್ಕ್ಯೂಟ್ ಹೌಸ್ ಸುತ್ತಮುತ್ತ ಪರಿಸರದಲ್ಲಿ ಕೈಗೊಳ್ಳಲಾಯಿತು.
ಮಂಗಳೂರು ರಾಮಕೃಷ್ಣ ಮಿಷನ್ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀಯವರ ಉಪಸ್ಥಿತಿಯಲ್ಲಿ ಇಂದು ಬೆಳಿಗ್ಗೆ 7:30ಕ್ಕೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲಗಳ ಖಾತೆ, ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದ.ಕ. ಸಂಸದರಾದ ಶ್ರೀ ನಳಿನಕುಮಾರ ಕಟೀಲ್ ಇವರು ಮುಖ್ಯ ಅತಿಥಿಗಳಾಗಿ ಭಗವಹಿಸಿದರು. ಶ್ರೀ ಜೆ. ಆರ್. ಲೋಬೊ, ಕ್ಯಾಪ್ಟನ್ ಗಣೇಶ್ ಕಾರ್ಣಿಕ, ಮಾಜಿ ಶಾಸಕರಾದ ಯೋಗೀಶ ಭಟ್, ಶ್ರೀ ಜೆ. ಕೃಷ್ಣ ಪಾಲೆಮಾರ್, ಎಂ.ಆರ್.ಪಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಚ್ ಕುಮಾರ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಎಂಆರ್ಪಿಲ್ ನೌಕರರು, ವಿವಿ ಕ್ರಿಕೆಟ್ ಅಸೋಸಿಯೇಶನ್, ಅಮಲ ಭಾರತ ತಂಡ, ಮಂಗಳೂರು ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಶನ್ ಹಾಗೂ ಐಸಿರಿ ಕಲಾ ತಂಡ ಇವರೆಲ್ಲರ ಸಹಯೋಗದಲ್ಲಿ ರಾಮಕೃಷ್ಣ ಮಿಷನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಸರ್ಕ್ಯೂಟ್ ಹೌಸ್ ಎದುರಿಗೆ ಅಯೋಜಿತವಾಗಿದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ್ಯ ಸಚಿವರು ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು.
ಸ್ವಚ್ಛ ಭಾರತ ಅಭಿಯಾನ ಕೇವಲ ಸರಕಾರಿ ಕಾರ್ಯಕ್ರಮವಾಗಿ ಉಳಿಯದೇ ಜನಾಂದೋಲವಾಗಿ ರೂಪುಗೊಂಡಿರುವುದು ಬಹಳ ಆನಂದದ ಸಂಗತಿ. ಮಂಗಳೂರಿಗೆ ತನ್ನದೇ ಆದ ವಿಶೇ?ತೆಯಿದೆ. ಇಲ್ಲಿನ ಜನತೆ ಮಾಡುವುದನ್ನು ಬೆಂಗಳೂರು ಜನತೆ ಎರಡು ಮೂರು ದಿನದ ನಂತರ ಯೋಚಿಸುತ್ತದೆ-ಮಾಡುತ್ತದೆ. ಒಂದು ತಿಂಗಳ ನಂತರ ದೇಶ ಅದನ್ನು ಮಾಡುತ್ತದೆ ಎಂದು ಹೇಳಿ ಮಂಗಳೂರಿನ ಜನತೆಗೆ ಅಭಿನಂದನೆ ತಿಳಿಸಿದರು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸಕಲರನ್ನು ಸ್ವಾಗತಿಸಿದರು. ಸ್ವಾಮಿ ಜಿತಕಾಮಾನಂದಜಿ ಆಶೀರ್ವಚನ ನೀಡಿದರು. ಆಳ್ವಾಸ್ ಕಾಲೇಜಿನ ಉಪನ್ಯಾಸಕ ಶ್ರೀ ರಾಮಪ್ರಸಾದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.