ಮುಂಬೈ: ಭಾರತದಲ್ಲಿ ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಲಸಿಕೆಗಳ ಉತ್ಪಾದನೆ ಮತ್ತು ಪೂರೈಕೆಗೆ ಸಂಬಂಧಿಸಿದಂತೆ ರಷ್ಯಾದ ರಷಿಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಜೊತೆಗೆ ವೊಕ್ಹಾರ್ಟ್ ಲಿಮಿಟೆಡ್ ಒಡಂಬಡಿಕೆ ಮಾಡಿಕೊಂಡಿದೆ.
ಈ ಎರಡು ಲಸಿಕೆಗಳನ್ನು ದೇಶೀಯವಾಗಿ ಉತ್ಪಾದನೆ ಮಾಡಿ, ಪೂರೈಕೆ ಮಾಡುವ ನಿಟ್ಟಿನಲ್ಲಿ ಆರ್ಡಿಐಎಫ್ನ ಸಹಯೋಗಿ ಸಂಸ್ಥೆ ಎನ್ಸೊ ಹೆಲ್ತ್ ಕೇರ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. 2023 ರ ವರೆಗೂ ಈ ಒಪ್ಪಂದ ಇರಲಿದೆ.
ಈಗಾಗಲೇ ಸ್ಪುಟ್ನಿಕ್ ವಿ ಲಸಿಕೆಯು 69 ದೇಶಗಳಲ್ಲಿ ನೋಂದಣಿಯಾಗಿದೆ. ಈ ಲಸಿಕೆಗಳು ಕೊರೋನಾ ರೂಪಾಂತರದ ವಿರುದ್ಧ 83.1% ಗಳಷ್ಟು ಪರಿಣಾಮಕಾರಿಯಾಗಿದೆ. ಹಾಗೆಯೇ ಕೊರೋನಾ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮೇಲೆಯೂ ಈ ಲಸಿಕೆ 94.4% ಪರಿಣಾಮಕಾರಿ. ಆ ಮೂಲಕ ಸ್ಪುಟ್ನಿಕ್ ಲಸಿಕೆ ವಿಶ್ವಾಸಾರ್ಹ ಲಸಿಕೆ ಎಂಬುದನ್ನು ಸಹ ತಜ್ಞರು ಸಾಬೀತು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.