ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಇಂದಿಗೆ ಒಂದು ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು.
ಒಂದು ರಾಷ್ಟ್ರದ ಅಭಿವೃದ್ಧಿ ಆ ರಾಷ್ಟ್ರದ ಯುವ ಜನರಿಗೆ ದೊರೆಯುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿಗೆ ತಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವ ಪಡೆದಿದೆ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಪದ್ಧತಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ತೆರೆದುಕೊಳ್ಳುವ, ಆಯ್ಕೆ ಮಾಡಿಕೊಳ್ಳುವ ಹಾಗೆಯೇ ಅದರಿಂದ ನಿರ್ಗಮಿಸುವ ಹಲವು ಆಯ್ಕೆಗಳನ್ನು ಒದಗಿಸುತ್ತದೆ. ಇದರಿಂದ ಯಾವುದೋ ಒಂದು ನಿರ್ಧಿಷ್ಟ ಕೊಂಡಿಗೆ ಅಂಟಿಕೊಂಡ ಶೈಕ್ಷಣಿಕ ಸಂಕೋಲೆಗಳಿಂದ ಮುಕ್ತರಾಗಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಯಾವುದೇ ವಿದ್ಯಾರ್ಥಿ ತನಗೆ ಇಷ್ಟವಾದ ಕೋರ್ಸ್ ಆಯ್ಕೆ ಮಾಡಲು ಮತ್ತು ಆ ಕೋರ್ಸ್ನಲ್ಲಿ ಮುಂದುವರಿಯಲು ಅವರು ಆಸಕ್ತಿ ಹೊಂದಿಲ್ಲದ ಪಕ್ಷದಲ್ಲಿ ಅವರಿಗೆ ಅದನ್ನು ಅಲ್ಲೇ ಕೊನೆಗೊಳಿಸುವ ಅವಕಾಶವನ್ನು ಈ ನೀತಿಯಲ್ಲಿ ನೀಡಲಾಗಿದೆ. ಇದೊಂದು ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗೆಯೇ ಕೊರೋನಾ ಸಂಕಷ್ಟದ ಅವಧಿಯಲ್ಲಿ ಬದಲಾದ ಶಿಕ್ಷಣ ಕ್ರಮದ ಬಗೆಗೂ ಮಾತನಾಡಿದ ಅವರು, ನಮ್ಮ ಯುವಜನರು ಶೈಕ್ಷಣಿಕ ಬದಲಾವಣೆಗಳನ್ನು ತರಲು ಸಿದ್ಧರಾಗಿದ್ದಾರೆ. ಕೊರೋನಾ ಸನ್ನಿವೇಶದಲ್ಲಿ ಬದಲಾದ ಶಿಕ್ಷಣ ಕ್ರಮಕ್ಕೆ ಹೊಂದಿಕೊಂಡಿರುವುದೇ ಇದಕ್ಕೆ ಸಾಕ್ಷಿ ಹೇಳುತ್ತದೆ. ಈ ಸಂದರ್ಭದಲ್ಲಿ ತ್ವರಿತವಾಗಿ ವಿದ್ಯಾರ್ಥಿಗಳನ್ನು ತಲುಪುವ ಆನ್ಲೈನ್ ಶಿಕ್ಷಣ ದೈನಂದಿನ ಅಭ್ಯಾಸವಾಗಿರುವುದಾಗಿಯೂ ಅವರು ಹೇಳಿದರು.
ಹೊಸ ಶಿಕ್ಷಣ ನೀತಿ ಯುವ ಜನರಿಗೆ ಸಂಪೂರ್ಣ ಉತ್ಸಾಹ ಒದಗಿಸುವ ಭರವಸೆ ಇದೆ. ಪ್ರಸ್ತುತ ಪ್ರಾರಂಭಿಸಲಾದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕ್ರಮ ಯುವ ಜನರ ಭವಿಷ್ಯ ಬೆಳಗಿಸುತ್ತದೆ. ಇದು ಎಐ ಚಾಲಿತ ಆರ್ಥಿಕತೆಗೂ ಹಾದಿ ಸೃಷ್ಟಿಸಲಿದೆ ಎಂದು ಅವರು ನುಡಿದರು. ಹಾಗೆಯೇ ದೇಶದ 8 ರಾಜ್ಯಗಳಿಗೆ ಸಂಬಂಧಿಸಿದಂತೆ 14 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ನೀಡುವ ಕ್ರಮವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತಸವಾಗುತ್ತಿದೆ ಎಂದು ಅವರು ಹೇಳಿದರು.
Addressing a programme to mark a year of the National Education Policy. #TransformingEducation https://t.co/65x9i0B0g1
— Narendra Modi (@narendramodi) July 29, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.