ನವದೆಹಲಿ: ಗುಜರಾತ್ನ ಭಾವನಗರದ ಬ್ಲ್ಯಾಕ್ ಬಕ್ ರಾಷ್ಟ್ರೀಯ ಉದ್ಯಾನದಲ್ಲಿ ರಸ್ತೆ ದಾಟುತ್ತಿರುವ ಸಾಲು ಸಾಲು ಕೃಷ್ಣ ಮೃಗಗಳ ರಮಣೀಯ ವಿಡಿಯೋ ಒಂದನ್ನು ಪ್ರಧಾನಿ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋವನ್ನು ಗುಜರಾತ್ ರಾಜ್ಯದ ಅಧಿಕೃತ ಟ್ವಿಟರ್ ಖಾತೆಯ ಈ ವಿಡಿಯೋವನ್ನು ಎಕ್ಸಲೆಂಟ್ ಎಂಬ ಶಿರ್ಷಿಕೆಯಡಿ ಮೋದಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸುಮಾರು 3000 ಕ್ಕೂ ಅಧಿಕ ಕೃಷ್ಣ ಮೃಗಗಳು ಏಕಕಾಲಕ್ಕೆ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹಾರುತ್ತಾ, ನೆಗೆಯುತ್ತಾ ಸಾಗುವ ದೃಶ್ಯಗಳನ್ನು ನಾವು ಕಾಣಬಹುದಾಗಿದೆ.
ಪ್ರಧಾನಿ ಮೋದಿ ಅವರು ಹಂಚಿಕೊಂಡಿರುವ ಈ ಅತ್ಯದ್ಭುತ ವಿಡಿಯೋವನ್ನು ಈ ವರೆಗೆ 77.3 K ಅಭಿಮಾನಿಗಳು ಲೈಕ್ ಮಾಡಿದ್ದಾರೆ. 10 K ಜನರು ರಿಟ್ವೀಟ್ ಮಾಡಿದ್ದಾರೆ.
Excellent! https://t.co/9xxNLllQtP
— Narendra Modi (@narendramodi) July 28, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.