ನವದೆಹಲಿ: 2021 ರ ಸೆಪ್ಟೆಂಬರ್ ತಿಂಗಳಿನಿಂದ ಸೆರಂ ಇನ್ಸ್ಟಿಟ್ಯೂಟ್ ಸ್ಪುಟ್ನಿಕ್ ವಿ ಲಸಿಕೆಯನ್ನು ಉತ್ಪಾದನೆ ಮಾಡಲಿದೆ ಎಂದು ರಷ್ಯಾದ ಮೇಕರ್ ತಿಳಿಸಿದೆ.
ಈ ಲಸಿಕೆಯ ಉತ್ಪಾದನೆ ಪುಣೆಯ ಸೆರಂ ಸಂಸ್ಥೆಯಲ್ಲಿ ಆರಂಭವಾಗಲಿದೆ. ಈ ಸಂಬಂಧ ರಷ್ಯಾದ ಆರ್ಡಿಐಎಫ್ ಮಾಹಿತಿ ನೀಡಿದ್ದು, ಭಾರತದಲ್ಲಿ ಪ್ರತಿ ವರ್ಷ 300 ಮಿಲಿಯನ್ ಲಸಿಕೆ ಉತ್ಪಾದನೆ ಮಾಡುವ ಗುರಿ ಇರುವುದಾಗಿ ತಿಳಿಸಿದೆ.
ಈ ಸಂಬಂಧ ಸೆರಂ ಸಂಸ್ಥೆಗೆ ತಂತ್ರಜ್ಞಾನ ರವಾನೆ ಪ್ರಕ್ರಿಯೆ ಸಹ ಈಗಾಗಲೇ ಆರಂಭವಾಗಿದೆ. ಸೆರಂ ಈಗಾಗಲೇ ಸೆಲ್ ಮತ್ತು ವೆಕ್ಟರ್ ಮಾದರಿಗಳನ್ನು ಗಮಾಲಿಯಾದಿಂದ ಪಡೆದುಕೊಂಡಿದೆ. ಸೆಪ್ಟೆಂಬರ್ನಲ್ಲಿ ಉತ್ಪಾದನೆ ಆರಂಭವಾಗಲಿದೆ. ಈ ಲಸಿಕೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದು, ಆಗಸ್ಟ್ ತಿಂಗಳಲ್ಲಿ 16 – 18 ಕೋಟಿ ಲಸಿಕೆಗಳನ್ನು ಉತ್ಪಾದನೆ ಮಾಡಲಾಗುತ್ತದೆ ಎಂದು ರಷ್ಯಾ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.