ಪುರಿ: ಒಡಿಶಾದ ಪುರಿಯಲ್ಲಿ ಭಗವಾನ್ ಜಗನ್ನಾಥನ ವಿಶ್ವ ಪ್ರಸಿದ್ಧ ರಥಯಾತ್ರೆ ಇಂದಿನಿಂದ ಆರಂಭವಾಗಲಿದೆ.
ರಥಯಾತ್ರೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ, ಅವಘಡಗಳು ಸಂಭವಿಸದಂತೆ, ಸರಾಗವಾಗಿ ನಡೆಯುವಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳನ್ನು ಖಚಿತ ಪಡಿಸಲಾಗಿದೆ. ಹಾಗೆಯೇ ಈ ಬಾರಿಯ ರಥಯಾತ್ರೆ ಕೊರೋನಾ ಸಾಂಕ್ರಾಮಿಕ ಕಾರಣದಿಂದ ಹೆಚ್ಚು ಭಕ್ತರಿಲ್ಲದೆ ನಡೆಯುತ್ತಿದ್ದು, ಕಳೆದ ಬಾರಿಯೂ ಕೊರೋನಾ ಹಿನ್ನೆಲೆಯಲ್ಲಿ ಇದೇ ರೀತಿಯ ಸ್ಥಿತಿ ನಿರ್ಮಾಣವಾಗಿತ್ತು.
ಚೆಹ್ರಾ ಪಹನ್ರಾದ ಸಂಪ್ರದಾಯಗಳು ಮುಗಿದ ಬಳಿಕ ಇಂದು ಮಧ್ಯಾಹ್ನದಿಂದ ಈ ರಥೋತ್ಸವ ಆರಂಭವಾಗಲಿದೆ. ವರ್ಷಂಪ್ರತಿ ಈ ರಥವನ್ನು ಸಾವಿರಾರು ಭಕ್ತರು ಎಳೆಯುತ್ತಿದ್ದು, ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಕೊರೋನಾ ನೆಗೆಟಿವ್ ವರದಿ ಹೊಂದಿರುವ ಕೆಲವೇ ಕೆಲವು ಸ್ವಯಂಸೇವಕರು ಈ ರಥಯಾತ್ರೆ ನಡೆಸಿಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸುಮಾರು 8000 ಜನರನ್ನು ಆರ್ಟಿಪಿಸಿಆರ್ ಪರೀಕ್ಷೆಗೂ ಒಳಪಡಿಸಲಾಗಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ರಥಯಾತ್ರೆಗೆ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. ಟ್ವೀಟ್ ಮಾಡಿರುವ ಅವರು, “ಜಗನ್ನಾಥ ರಥಯಾತ್ರೆಯ ವಿಶೇಷ ಸಂದರ್ಭದಲ್ಲಿ ದೇಶದ ಸಮಸ್ತ ಜನತೆಗೆ ಶುಭಕಾಮನೆಗಳು. ಭಗವಂತ ಜಗನ್ನಾಥನಿಗೆ ನಾವೆಲ್ಲಾ ತಲೆಬಾಗಿ ನಮಿಸೋಣ. ದೇಶದ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಜಗನ್ನಾಥನು ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಕರುಣಿಸಲಿ” ಎಂದು ಪ್ರಾರ್ಥಿಸಿದ್ದಾರೆ.
Greetings to everyone on the special occasion of the Rath Yatra. We bow to Lord Jagannath and pray that his blessings bring good health and prosperity in everyone’s lives. Jai Jagannath!
— Narendra Modi (@narendramodi) July 12, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.