ನವದೆಹಲಿ: ಕಳೆದ 24 ಗಂಟೆಗಳಲ್ಲಿ 86.16 ಲಕ್ಷಕ್ಕೂ ಹೆಚ್ಚು ಕೋವಿಡ್ -19 ಲಸಿಕೆ ಡೋಸ್ ಅನ್ನು ದೇಶದಲ್ಲಿ ನೀಡಲಾಗಿದ್ದು, ಇದು ಇದುವರೆಗಿನ ಗರಿಷ್ಠ ಏಕದಿನ ದಾಖಲೆಯಾಗಿದೆ.
ಸರ್ಕಾರದ ಕೋವಿನ್ ವೆಬ್ಸೈಟ್ನಲ್ಲಿನ ದತ್ತಾಂಶವು ಸೋಮವಾರ ಒಟ್ಟು 86,16,373 ಲಸಿಕೆ ಡೋಸ್ಗಳನ್ನು ನೀಡಲಾಗಿದೆ ಎಂದು ತೋರಿಸಿದೆ.
ಕೇಂದ್ರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆಗಳನ್ನು ನೀಡಲು ಪ್ರಾರಂಭಿಸಿದ ಮೊದಲ ದಿನವೇ ಈ ದಾಖಲೆ ಸೃಷ್ಟಿಯಾಗಿದೆ. ನಿನ್ನೆಯಿಂದ ರಾಜ್ಯಗಳ ಲಸಿಕೆ ಕಾರ್ಯಕ್ರಮದ ಜವಾಬ್ದಾರಿಯನ್ನು ಕೇಂದ್ರ ಹಿಂದಕ್ಕೆ ತೆಗೆದುಕೊಂಡಿದೆ.
ಕೇಂದ್ರವು ಕಂಪೆನಿಗಳು ಉತ್ಪಾದಿಸುವ ಶೇ .75 ರಷ್ಟು ಲಸಿಕೆಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ. ಖಾಸಗಿ ಆಸ್ಪತ್ರೆಗಳು ಉಳಿದ 25 ಶೇಕಡಾವನ್ನು ಖರೀದಿಸುವುದನ್ನು ಮುಂದುವರೆಸುತ್ತವೆ. ಹಣ ಪಾವತಿಸಿ ಲಸಿಕೆ ಪಡೆಯಲು ಸಿದ್ಧರಿರುವವರು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಳ್ಳಬಹುದು.
“ಇಂದಿನ ದಾಖಲೆಯ ವ್ಯಾಕ್ಸಿನೇಷನ್ ಸಂಖ್ಯೆಗಳು ಖುಷಿ ನೀಡಿದೆ. ಕೋವಿಡ್-19 ವಿರುದ್ಧ ಹೋರಾಡಲು ಲಸಿಕೆ ನಮ್ಮ ಪ್ರಬಲ ಅಸ್ತ್ರವಾಗಿದೆ. ಲಸಿಕೆ ಪಡೆದವರಿಗೆ ಅಭಿನಂದನೆಗಳು ಮತ್ತು ಹಲವಾರು ನಾಗರಿಕರಿಗೆ ಲಸಿಕೆ ದೊರೆತಿದೆ ಎಂದು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಿರುವ ಎಲ್ಲಾ ಮುಂಚೂಣಿಯ ಯೋಧರಿಗೆ ಅಭಿನಂದನೆಗಳು” ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
Today’s record-breaking vaccination numbers are gladdening. The vaccine remains our strongest weapon to fight COVID-19. Congratulations to those who got vaccinated and kudos to all the front-line warriors working hard to ensure so many citizens got the vaccine.
Well done India!
— Narendra Modi (@narendramodi) June 21, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.