ನವದೆಹಲಿ: ತನ್ನ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು ಪ್ರಯತ್ನಿಸುತ್ತಿರುವ ಭಾರತಕ್ಕೆ ಬೆಂಬಲ ನೀಡಲು ಗೂಗಲ್ ಮುಂದಾಗಿದೆ. ಹೆಚ್ಚು ಅಗತ್ಯವಿರುವ ಮತ್ತು ಗ್ರಾಮೀಣ ಸ್ಥಳಗಳ ಆರೋಗ್ಯ ಸೌಲಭ್ಯಗಳಲ್ಲಿ ಸುಮಾರು 80 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 109 ಕೋಟಿ ರೂ ಹೆಚ್ಚುವರಿ ನೆರವನ್ನು ಅದು ಘೋಷಣೆ ಮಾಡಿದೆ.
ಸಾರ್ವಜನಿಕ ಆರೋಗ್ಯ ಮಾಹಿತಿ ಅಭಿಯಾನದ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಭಾರತದಲ್ಲಿ ತುರ್ತು ಪರಿಹಾರ ಕಾರ್ಯಗಳನ್ನು ಬೆಂಬಲಿಸಲು ಟೆಕ್ ದೈತ್ಯ ಒಟ್ಟು 135 ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದೆ.
“ಸಾರ್ವಜನಿಕ ಆರೋಗ್ಯ ಅಭಿಯಾನಗಳನ್ನು ವರ್ಧಿಸಲು ಮತ್ತು ಅಗತ್ಯವಿರುವ ಭಾರತೀಯರಿಗೆ ತುರ್ತು ಬೆಂಬಲವನ್ನು ಪಡೆಯಲು ಸಹಾಯ ಮಾಡಿದ್ದೇವೆ. ಏಪ್ರಿಲ್ನಲ್ಲಿ, ನಮ್ಮ ಲೋಕೋಪಕಾರಿ ಅಂಗ Google.org ಮೂಲಕ, ಸಾರ್ವಜನಿಕ ಆರೋಗ್ಯ ಮಾಹಿತಿ ಅಭಿಯಾನದ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ತುರ್ತು ಪರಿಹಾರ ಕಾರ್ಯಗಳನ್ನು ಬೆಂಬಲಿಸಲು ನಾವು 18 ಮಿಲಿಯನ್ ಯುಎಸ್ಡಿ (135 ಕೋಟಿ ಐರೂಪಾಯಿ) ಅನುದಾನವನ್ನು ಘೋಷಿಸಿದ್ದೇವೆ ”ಎಂದು ಕಂಪನಿ ತಿಳಿಸಿದೆ.
ಮುಂಚೂಣಿ ಕಾರ್ಮಿಕರಲ್ಲಿ ಕೋವಿಡ್-19 ನಿರ್ವಹಣಾ ಕೌಶಲ್ಯಗಳನ್ನು ಬಲಪಡಿಸುವುದು, ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು ಮತ್ತು ಆರೋಗ್ಯ ಕಾರ್ಯಪಡೆಗಳನ್ನು ವಿಸ್ತರಿಸುವತ್ತ ಗಮನಹರಿಸಿರುವ ಗೂಗಲ್, ಗಿವ್ಇಂಡಿಯಾ, PATH ಮತ್ತು ARMMAN ನಂತಹ ಲಾಭರಹಿತ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುವುದಾಗಿ ಘೋಷಿಸಿದೆ.
“ಹೆಚ್ಚಿನ ಅಗತ್ಯವಿರುವ ಮತ್ತು ಗ್ರಾಮೀಣ ಪ್ರದೇಶಗಳ ಆರೋಗ್ಯ ಸೌಲಭ್ಯಗಳಲ್ಲಿ ಸುಮಾರು 80 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು Google.org ಬೆಂಬಲ ನೀಡಲಿದೆ, ಗಿವ್ಇಂಡಿಯಾ ಮತ್ತು ಪಾತ್ಗೆ ಸುಮಾರು 15 ಮಿಲಿಯನ್ ಯುಎಸ್ಡಿ (109 ಕೋಟಿ ರೂಪಾಯಿ) ನೀಡಲಾಗುತ್ತದೆ” ಎಂದು ಗೂಗಲ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.