ನವದೆಹಲಿ: ಚಿನ್ನದ ಆಭರಣಗಳ ಕಡ್ಡಾಯ ಹಾಲ್ ಮಾರ್ಕಿಂಗ್ ಇಂದಿನಿಂದ ಜಾರಿಗೆ ಬರಲಿದೆ. ಆರಂಭಿಕವಾಗಿ ಮಾರ್ಕಿಂಗ್ ಕೇಂದ್ರಗಳನ್ನು ಹೊಂದಿರುವ ದೇಶದ 256 ಜಿಲ್ಲೆಗಳಲ್ಲಿ ಹಾಲ್ ಮಾರ್ಕಿಂಗ್ ಪ್ರಾರಂಭವಾಗಲಿದೆ.
40 ಲಕ್ಷ ರೂ.ಗಳವರೆಗೆ ವಾರ್ಷಿಕ ವಹಿವಾಟು ಹೊಂದಿರುವ ಆಭರಣ ವ್ಯಾಪಾರಿಗಳಿಗೆ ಕಡ್ಡಾಯ ಹಾಲ್ಮಾರ್ಕಿಂಗ್ನಿಂದ ವಿನಾಯಿತಿ ನೀಡಲಾಗಿದೆ. ಕೈಗಡಿಯಾರಗಳು, ಫೌಂಟೇನ್ ಪೆನ್ನುಗಳು ಮತ್ತು ವಿಶಿಷ್ಟ ರೀತಿಯ ಕುಂದನ್, ಪೋಲ್ಕಿ ಮತ್ತು ಜಾದೌ ಮುಂತಾದ ವಿಶಿಷ್ಠ ಆಭರಣಗಳಿಗೂ ವಿನಾಯಿತಿ ನೀಡಲಾಗಿದೆ.
ಆಭರಣ ವ್ಯಾಪಾರಿಗಳು ಗ್ರಾಹಕರಿಂದ ಹಾಲ್ ಮಾರ್ಕ್ ಇಲ್ಲದ ಹಳೆಯ ಚಿನ್ನಾಭರಣಗಳನ್ನು ಖರೀದಿಸುವುದನ್ನು ಮುಂದುವರಿಸಬಹುದು. ಹಳೆಯ ಆಭರಣಗಳನ್ನು ಕರಗಿಸಿ ಹೊಸ ಆಭರಣಗಳನ್ನಾಗಿ ಮಾಡಿದ ನಂತರ ಅದನ್ನು ಹಾಲ್ ಮಾರ್ಕ್ ಮಾಡಬಹುದು.
ಚಿನ್ನದ ಆಭರಣ ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಸಾಕಷ್ಟು ಸಮಯ ನೀಡುವ ಸಲುವಾಗಿ ಆಗಸ್ಟ್ ಅಂತ್ಯದವರೆಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ.
“ಯೋಜನೆಯ ಅನುಷ್ಠಾನದ ಸಮಯದಲ್ಲಿ ಹೊರಹೊಮ್ಮಬಹುದಾದ ಸಮಸ್ಯೆಗಳನ್ನು ಪರಿಶೀಲಿಸಲು ಎಲ್ಲಾ ಭಾಗಿದಾರರು, ಕಂದಾಯ ಅಧಿಕಾರಿಗಳು ಮತ್ತು ಕಾನೂನು ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು” ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಹಾಲ್ ಮಾರ್ಕಿಂಗ್ ಗ್ರಾಹಕರಿಗೆ ಸರಿಯಾದ ಆಭರಣವನ್ನು ಆಯ್ಕೆ ಮಾಡಲು ಮತ್ತು ಚಿನ್ನವನ್ನು ಖರೀದಿಸುವಾಗ ಯಾವುದೇ ಅನಗತ್ಯ ಗೊಂದಲಗಳಿಗೆ ಈಡಾಗದಂತೆ ರಕ್ಷಣೆ ನೀಡುತ್ತದೆ. ಪ್ರಸ್ತುತ, ಭಾರತೀಯ ಚಿನ್ನದ ಆಭರಣಗಳಲ್ಲಿ ಕೇವಲ ಶೇ.30ರಷ್ಟು ಮಾತ್ರ ಹಾಲ್ ಮಾರ್ಕ್ ಆಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.